
ಕಳಸ:ಹೆಚ್ಚುತ್ತಿರುವ ಬೇಸಿಗೆ ಧಗೆ ಹೋಗಲಾಡಿಸಲು ಮತ್ತು ತೇವಾಂಶದ ಕೊರತೆಯಿಂದ ನಲುಗುತ್ತಿರುವ ತೋಟಗಾರಿಕಾ ಬೆಳೆಗಳಿಗೆ ಆಸರೆ ಆಗಲು ಮಳೆ ಸುರಿಸುವಂತೆ ಇದೇ 15ರಂದು ಕಳಸೇಶ್ವರ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ಶ್ರೀ ಕಳಸೇಶ್ವರ ಸ್ವಾಮಿ ಧಾರ್ಮಿಕ ಪ್ರತಿಷ್ಟಾನವು ಕಳಸೇಶ್ವರ ಸ್ವಾಮಿ ಸನ್ನಧಿಯಲ್ಲಿ ಶತವಾರ ರುದ್ರಾಭಿಷೇಕ, ಏಕದಶರುದ್ರಾಭಿಷೇಕ, ಪರ್ಜನ್ಯ ಜಪ ಮತ್ತು ಪರ್ಜನ್ಯ ಹೋಮ ಆಯೋಜಿಸಲಾಗಿದೆ.
ಶ್ರೀ ಸರ್ವಾಂಗಸುಂದರಿ ಅಮ್ಮನವರ ಸನ್ನಿಧಿಯಲ್ಲಿ ಸಹಸ್ರನಾಮ ಮತ್ತು ಕುಂಕುಮಾರ್ಚನೆ ಆಯೋಜಸಲಾಗಿದೆ.ಆನೆ ವಿಘ್ನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅಷ್ಟೋತ್ತರ, ಪಂಚಕಜ್ಜಾಯ ನಿವೇದನೆ ನೆರವೇರುತ್ತದೆ.
ಕ್ಷೇತ್ರಪಾಲ ಸನ್ನಿಧಿಯಲ್ಲಿ ಚರುಬಲಿ ಸಮರ್ಪಣೆಯ ನಂತರ ಕಳಸೇಶ್ವರ ಸ್ವಾಮಿಗೆ ಮಹಾಪೂಜೆ ನೆರವೇರಿಸಲಾಗುತ್ತದೆ.ಆನಂತರ ಮಳೆಗಾಗಿ ವಿಶೇಷ ಪ್ರಾರ್ಥನೆ ನೆರವೇರಿಸಲಾಗುತ್ತದೆ ಎಂದು ಧಾರ್ಮಿಕ ಸೇವಾ ಪ್ರತಿಷ್ಟಾನದ ಕಾರ್ಯದರ್ಶಿ ಜಿ.ಸಿ.ಜಯಕುಮಾರ ಭಟ್ ತಿಳಿಸಿದ್ದಾರೆ.