filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 45;
ಕಳಸ:ಇಲ್ಲಿನ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಗೆ ಈಗ 40ರ ಹರೆಯ. 1986ರಲ್ಲಿ ಆರಂಭವಾದ ಮಂಡಳಿಯು ಸತತ 40 ವರ್ಷಗಳ ಕಾಲ ವೈವಿಧ್ಯಮಯ ಚಟುವಟಿಕೆ ನಡೆಸಿ ಮನೆಮಾತಾಗಿದೆ.
ಇಲ್ಲಿನ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ 40ನೇ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ನಯನಾ ಮೋಟಮ್ಮ, ಪುರುಷರ ಬೆಂಬಲ ಇದ್ದರೆ ಮಾತ್ರ ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು ಎಂದು ಅಭಿಪ್ರಾಯಪಟ್ಟರು.
ಮಹಿಳೆಯರು ಮನೆಯಿಂದ ಹೊರಬರುವುದೇ ಕಷ್ಟವಿದ್ದ ಕಾಲದಲ್ಲಿ ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿ ತನ್ನ ಸಮಾಜಮುಖಿ ಕೆಲಸ ಆರಂಭಿಸಿದೆ.40 ವರ್ಷಗಳಲ್ಲಿ ಈ ಮಹಿಳಾ ಮಂಡಳಿಯು ಅವಿರತವಾಗಿ ಕೆಲಸ ಮಾಡಿದೆ. ಮಹಿಳಾ ಮಂಡಳಿಯು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರೋಗ್ಯ ತಪಾಸಣೆ ಮಾಡುವುದು, ಸ್ವಚ್ಛತೆ ಬಗೆ ಮಾಹಿತಿ ನೀಡುವುದು ಒಳ್ಳೆಯ ಕೆಲಸ ಎಂದರು.
ಕರ್ನಾಟಕ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಮಾತನಾಡಿ, ಮಹಿಳೆಯು ಮನೆಯಿಂದ ಹೊರಗೆ ಹೊರಟರೆ ಆಕೆಯ ನಡತೆ ಬಗ್ಗೆ ಸದಾ ಆರೋಪಗಳು ಶುರು ಆಗುತ್ತವೆ. ದಲಿತ ಮತ್ತು ಬುಡಕಟ್ಟು ವಿದ್ಯಾರ್ಥಿನಿಯರು ವಿದ್ಯೆಯ ಬಗ್ಗೆ ಗಮನ ಹರಿಸಿ. ಕೊನೆವರೆಗೂ ನಿಮ್ಮ ಜೊತೆಗೆ ಉಳಿಯುವುದು ನಿಮ್ಮ ವಿದ್ಯೆ ಮಾತ್ರ ಎಂದರು.

algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 46;
ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ವಿದುಷಾ, ಫಾರಿಸ್, ಶಾಝ್ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾದ ಕಳಸ ಕೆಪಿಎಸ್ ಶಾಲೆಯ ಶಿವಾನಂದ್ ಮತ್ತು ತಂಡದವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಮಂಡಳಿ ಅಧ್ಯಕ್ಷೆ ಕಿರಣ ಬ್ರಹ್ಮದೇವ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಚಂಪಾ ರಾವ್, ಸರೋಜಿನಿ ಆಚಾರ್, ಶೋಭಾ ದೇಸಾಯಿ, ಸುನೀತಾ ಶೆಣೈ, ಫಾತಿಮಾ ರೆಹಮಾನ್ ಭಾಗವಹಿಸಿದ್ದರು. ಆನಂತರ ಮಹಿಳೆಯರು ಬಗೆಬಗೆಯ ಸಾಂಸ್ಕ್ರತಿಕ ಪ್ರದರ್ಶನ ನೀಡಿದರು.
