ಕಳಸ:ಬಾಳೆಹೊಳೆ ಸಮೀಪದ ಕೆಳಭಾಗ ಮೂಲದ ಯುವ ವೈದ್ಯ ಡಾ. ಮನೋಹರ್ ಹೆಚ್.ಜಿ ಅವರು ಕೋವಿಡ್ ಬಗ್ಗೆ ಸಂಶೋಧನೆ ನಡೆಸಿ ಬರೆದ ಲೇಖನ ಯೂರೋಪಿನ ಪ್ರತಿಷ್ಟಿತ ಐರಿಸ್ ಜರ್ನಲ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ ಪ್ರಕಟ ಆಗಿದೆ.
ಕೆಳಭಾಗದ ಗುರುಪ್ರಸಾದ್ ಭಟ್ ಮತ್ತು ವಿಜಯಲಕ್ಮಿ ಅವರ ಮಗನಾದ ಡಾ. ಮನೋಹರ್ ಮಂಗಳೂರಿನ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದಾರೆ.ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಸಂಸ್ಥೆಯಲ್ಲಿ ಕರೋನ ವಿಷಯದಲ್ಲಿ ಸಂಶೋಧನೆ ಮಾಡಿ ಈ ಸಂಸ್ಥೆಯಿಂದ ಪ್ರಮಾಣಪತ್ರ ಮತ್ತು 50 ಸಾವಿರ ರೂಪಾಯಿ ನಗದು ಬಹುಮಾನ ಪಡೆದಿದ್ದಾರೆ.
ಎಂಬಿಬಿಎಸ್ ಪದವಿಯಲ್ಲಿ ಚಿನ್ನದ ಪದಕ ಪಡೆದು ವಿಶ್ವವಿದ್ಯಾನಿಲಯದಲ್ಲಿ 2ನೇ ರ್ಯಾಂಕ್ ಗಳಿಸಿದ್ದಾರೆ. ಇದೀಗ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದಾರೆ.
