ಕಳಸ:ಇಲ್ಲಿನ ಕಳಸೇಶ್ವರ ಮತ್ತು ಗಿರಿಜೆಯ ಕಲ್ಯಾಣ ಇದೇ 20ರಂದು ನೆರವೇರಲಿದೆ.
ಪ್ರತಿ ವರ್ಷವೂ ಕಳಸದಲ್ಲಿ ಮಾತ್ರ ಗಿರಿಜಾ ಕಲ್ಯಾಣ ನೆರವೇರುತ್ತಿದ್ದು 17ರಂದು ಗಣಪತಿಪೂಜೆ ಮೂಲಕ ಧಾರ್ಮಿಕ ವಿಧಿಗಳು ಆರಂಭವಾಗಲಿದೆ.
18ರಂದು ರಾತ್ರಿ ಕೌತುಕೋತ್ಸವ, 19ರಂದು ಧ್ವಜಾರೋಹಣ, ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ, ಕಾರ್ತಿಕ ದೀಪೋತ್ಸವ ನಡೆಯಲಿದೆ.20ರಂದು ಶತವಾರ ರುದ್ರಾಭಿಷೇಕ, ರಂಗಪೂಜೆ ನಡೆಯಲಿದ್ದು ಶನಿವಾರ ಬೆಳಗಿನ ಜಾವ 3 ಗಂಟೆಗೆ ಗಿರಿಜಾ ಕಲ್ಯಾಣ ನಡೆಯಲಿದೆ.
21ರಂದು ತುಳಸಿಪೂಜೆ, ಚಿಕ್ಕ ರಥೋತ್ಸವ, 22ರಂದು ಬಿಂದುಮಾಧವ ದೇವರ ಆಗಮನ, ಡೋಲೋತ್ಸವ ನೆರವೇರಲಿದೆ. 23ರಂದು ಕುಂಕುಮೋತ್ಸವ, ಧ್ವಜಾವರೋಹಣ, 24ರಂದು ಧಾತ್ರಿ ಹೋಮ, ವಶಿಷ್ಟಾಶ್ರಮಕ್ಕೆ ಆಗಮನ, ಕೃತ್ತಿಕಾ ದೀಪೋತ್ಸವ , ತ್ರಿಪುರೋತ್ಸವ ಮತ್ತು ಹರಿಹರ ಸಮಾಗಮ ನೆರವೇರಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
