ಕಳಸ:ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇದೇ 28ರಂದು ಲಕ್ಷ ದೀಪೋತ್ಸವ ನೆರವೇರಲಿದೆ.
ಅಂದು ಬೆಳಿಗ್ಗೆ 11 ಗಂಟೆಗೆ ಗಣಪತಿ ಸ್ವಾಮಿಗೆ ಲಕ್ಷ ದೂರ್ವಾರ್ಚನೆ ಸಮರ್ಪಣೆ ಮಡಲಾಗುತ್ತದೆ.ಭಕ್ತ ನಿವಾಸದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿದೆ.
ಸಂಜೆ 6 ಗಂಟೆಗೆ ಶ್ರೀ ಮಾತೆಗೆ ರಥೋತ್ಸವ ಸೇವೆ ಸಮರ್ಪಿಸಲಾಗುತ್ತದೆ. ರಾತ್ರಿ 9.30ಕ್ಕೆ ಅನ್ನಪೂರ್ಣೆಗೆ ದೀಪೋತ್ಸವ ಹಾಗೂ ಪ್ರಾಂಗಣ ಪಲ್ಲಕ್ಕಿ ಉತ್ಸವ ನೆರವೇರಲಿದೆ.
28ರಂದು ಶ್ರೀಮಾತೆಗೆ ಕೋಟಿ ಕುಂಕುಮಾರ್ಚನೆ ಸಮರ್ಪಣೆ ನಡೆಯಲಿದೆ. 15ನೇ ವರ್ಷದ ರಕ್ತದಾನ ಶಿಬಿರವೂ ಅಂಬಾ ವಿಲಾಸದಲ್ಲಿ ನಡೆಯಲಿದೆ.ರಾತ್ರಿ 9 ಗಂಟೆಯ ನಂತರ ಅನ್ನಪೂರ್ಣೆಗೆ ಲಕ್ಷ ದೀಪೋತ್ಸವ, ಪುಷ್ಪಕಾ ರಥೋತ್ಸವ ಹಾಗೂ ಪ್ರಾಂಗಣ ರಥೋತ್ಸವ ನಡೆಯಲಿದೆ. ಎರಡೂ ದಿನ ರಾತ್ರಿ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದೂ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
