ಕಳಸ:ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99 ಫಲಿತಾಂಶದ ಸಾಧನೆ ತೋರಿದೆ.
ಪರೀಕ್ಷೆ ಬರೆದ 97 ವಿದ್ಯಾರ್ಥಿಗಳಲ್ಲಿ 96 ವಿದ್ಯಾರ್ಥಿಗಳು ವಿವಿಧ ದರ್ಜೆಗಳಲ್ಲಿ ತೇರ್ಗಡೆ ಆಗಿದ್ದಾರೆ.14 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, 57 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಅನಂತಪದ್ಮನಾಭ ತಿಳಿಸಿದ್ದಾರೆ.


ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಕಾಲೇಜು ಶೇ.100 ಫಲಿತಾಂಶ ಪಡೆದಿದ್ದು ವಾಣಿಜ್ಯ ವಿಭಾಗದಲ್ಲಿ ಶೇ.98 ಫಲಿತಾಂಶ ಬಂದಿದೆ.ವಾಣಿಜ್ಯ ವಿಭಾಗದಲ್ಲಿ 582 ಅಂಕ ಗಳಿಸಿರುವ ಮಧುರ ಬಿ.ಪಿ. ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಕಲಾ ವಿಭಾಗದಲ್ಲಿ 570 ಅಂಕ ಪಡೆದಿರುವ ರಕ್ಷಾ ಮತ್ತು ವಿಜ್ಞಾನ ವಿಭಾಗದಲ್ಲಿ 525 ಅಂಕ ಗಳಿಸಿರುವ ತೇಜಾ ಆ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.
ಕಾಲೇಜಿನ ಈ ಸಾಧನೆಗೆ ಕಾರಣರಾದ ಎಲ್ಲ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಅಭಿನಂದಿಸಿದ್ದಾರೆ.
