ಕಳಸ:ಇಲ್ಲಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರಾಘವ ಮತ್ತು ಕಾರ್ಯದರ್ಶಿಯಾಗಿ ಕಲ್ಲಾನೆ ಸತೀಶ್ ಅಧಿಕಾರ ಸ್ವೀಕರಿಸಿದರು.
ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ಮೋಹನ್ ಹಾಗೂ ಸಿ.ಪಿ. ರಮೇಶ್ ಪದಗ್ರಹಣದ ವಿಧಿಗಳನ್ನು ನೆರವೇರಿಸಿದಿರು. ಹೊರನಾಡಿನ ಜಿ.ಭೀಮೇಶ್ವರ ಜೋಷಿ ಹೊಸ ಪದಾಧಿಕಾರಿಗಳಿಗೆ ಶುಭ ಕೋರಿದರು. ಸಮಾಜಮುಖಿ ಕೆಲಸದಲ್ಲಿ ಇನ್ನಷ್ಟು ತೊಡಗಿಕೊಳ್ಳುವಂತೆ ಸಲಹೆ ನೀಡಿದರು.
ಮನು ಜಿ.ಎಂ. ಖಜಾಂಚಿಯಾಗಿ, ರೋಹನ್ ಸಹಕಾರ್ಯದರ್ಶಿಯಾಗಿ ಆಯ್ಕೆಯಾದರು. ದತ್ತಾತ್ರಿ, ಶೈವಿಕ್,ಸುಗಮ್, ಸಂದೀಪ್, ಕೆ.ಕೆ.ಬಾಲಕೃಷ್ಣ ಭಟ್, ಪ್ರಸನ್ನ, ಬ್ರಹ್ಮದೇವ, ರಿತೇಶ್, ಗಿರಿಜಾಶಂಕರ್ ಜೋಷಿ, ಅಬ್ಸನ್ ಬಿನು, ಪಣೀಶ್ ವಿವಿಧ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷ ಮಹೇಂದ್ರ ಮತ್ತು ಕಾರ್ಯದರ್ಶಿ ವಿಶಾಲ್ ತಮ್ಮ ಅವಧಿಯಲ್ಲಿ ನಡೆಸಿದ ಸಮಾಜಮುಖಿ ಚಟುವಟಿಕೆಗಳ ಬಗ್ಗೆ ವಿವರ ನೀಡಿದರು.

ಇದೇ ಸಂದರ್ಭದಲ್ಲಿ ಇನ್ನರ್ವೀಲ್ ಘಟಕದ ಅಧ್ಯಕ್ಷೆಯಾಗಿ ಮಾಲಾ ಭಟ್, ಕಾರ್ಯದರ್ಶಿಯಾಗಿ ಶ್ರುತಿ ಪಣೀಶ್ ಅಧಿಕಾರ ಸ್ವೀಕರಿಸಿದರು.ಶಮಿತಾ ಶೆಟ್ಟಿ, ದೀಪಾ ಕಾಶಿನಾಥ್, ಸಾವಿತ್ರಿ ಜೋಷಿ, ವೈಶಾಲಿ ಜೋಯಿಸ್, ಸಂಧ್ಯಾ ರಿತೇಶ್, ಉಷಾ ಕುಮಾರ್, ಮಾಲಿನಿ ಸತೀಶ್ ವಿವಿಧ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.ನಿರ್ಗಮಿತ ಅಧ್ಯಕ್ಷೆ ಶ್ರೀವಾಣಿ ಸುಗಮ್, ನಿರ್ಗಮಿತ ಕಾರ್ಯದರ್ಶಿ ನಿತ್ಯಾ ಸಂದೀಪ್ ತಮ್ಮ ಅವಧಿಯಲ್ಲಿ ಕೈಗೊಂಡ ಚಟುವಟಿಕೆಯನ್ನು ವಿವರಿಸಿದರು.
