ಕಳಸ:ಇದೇ ಆಗಸ್ಟ್ ೨೭ರಿಂದ ಸೆಪ್ಟೆಂಬರ್ ೪ರವರೆಗೆ ೯ ದಿನಗಳ ಕಾಲ ಎರಡನೇ ವರ್ಷದ ಸೌಹಾರ್ದ ಗಣೇಶೋತ್ಸವ ಆಚರಿಸಲಾಗುತ್ತದೆ.
೨೭ರಂದು ಸೌಹಾರ್ದ ಗಣಪತಿ ಪ್ರತಿಷ್ಟೆ ನಡೆಯಲಿದ್ದು ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿರುವುದು ವಿಶೇಷವಾಗಿದೆ.ಗಣಪತಿ ಉತ್ಸವದ ಪ್ರಯುಕ್ತ ಕ್ರೀಡಾ, ಸಾಂಸ್ಕçತಿಕ ಮತ್ತು ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ ೭.೩೦ಕ್ಕೆ ರಾಜ್ಯದ ಖ್ಯಾತ ಕಲಾವಿದರಿಂದ ನಾಟಕ, ರಸಮಂಜರಿ, ಸಾಂಸ್ಕçತಿಕ ವೈಭವ ಪ್ರದರ್ಶನ ನಡೆಯಲಿದೆ.
ಆಗಸ್ಟ್ ೩೧ರದು ಕಳಸದ ಆಸರೆ ಫೌಂಡೇಶನ್ ಕಳಸದ ಹಿಂದೂ ರುದ್ರಭೂಮಿಗೆ ವಿದ್ಯುತ್ ಚಾಲಿತ ಶವ ಸಂಸ್ಕಾರ ಯಂತ್ರ ಕೊಡುಗೆ ನೀಡಲಿದೆ.ಸೆಪ್ಟೆಂಬರ್ ೨ರಂದು ಮಹಾಗಣಪತಿ ಹೋಮ ನೆರವೇರಲಿದೆ. ೩ರಂದು ಸಂಜೆ ೬ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು ಹೊರನಾಡಿನ ಭೀಮೇಶ್ವರ ಜೋಷಿ, ಶಾಸಕಿನಯನಾ ಮೋಟಮ್ಮ, ಕ್ರೆöÊಸ್ತ ಗುರು ಡೇವಿಡ್ ಪ್ರಕಾಶ್, ಮುಸ್ಲಿಂ ಧರ್ಮಗುರು ಸುಫ್ಯಾನ್ ಸಖಾಫಿ ಮತ್ತಿತರರು ಭಾಗವಹಿಸಲಿದ್ದಾರೆ.
ಸೆಪ್ಟೆಂಬರ್ ೪ರಂದು ಸಂಜೆ ಕಳಸದ ರಾಜಬೀದಿಯಲ್ಲಿ ಆಕರ್ಷಕ ಉತ್ಸವದ ನಂತರ ಕೋಟಿತೀರ್ಥದಲ್ಲಿ ಗಣಪತಿ ವಿಗ್ರಹದ ಜಲಸ್ತಂಭನ ನಡೆಯುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಳಸದಲ್ಲಿ ಸೌಹಾರ್ದ ಗಣೇಶೋತ್ಸವದ ಆಹ್ವಾನ ಪತ್ರಿಕೆಯನ್ನು ಗುರುವಾರ ಬಿಡುಗಡೆ ಮಾಡಲಾಯಿತು. ಸಮಿತಿಯ ಪದಾಧಿಕಾರಿಗಳಾದ ಸುಜಯಾ, ರುದ್ರಯ್ಯ ಆಚಾರ್, ರವಿ ರೈ, ಬ್ರಹ್ಮದೇವ, ಪದ್ಮಕುಮಾರ್, ಮಂಜಪ್ಪ ಪೂಜಾರಿ, ಭಾಸ್ಕರ ಇದ್ದರು.
