ಕಳಸ:ಫಾರಂ ನಂಬರ್ 53ರಲ್ಲಿ ಭೂಮಿ ಪಡೆದಿದ್ದ ಅನೇಕ ರೈತರ ಭೂ ಮಂಜೂರಾತಿ ಸರ್ಕಾರದಿಂದ ವಜಾ ಆಗಿದ್ದು ಆ ಬಗ್ಗೆ ಕಾನೂನು ಸಲಹೆ ಪಡೆಯಲು ಇದೇ ಸೋಮವಾರ ಪಟ್ಟಣದಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿದೆ.
ಕಳಸ ರೈತ ಹಿತರಕ್ಷಣಾ ವೇದಿಕೆಯು ಆಯೋಜಿಸಿರುವ ಈ ಸಭೆಯಲ್ಲಿ ಹಿರಿಯ ನ್ಯಾಯವಾದಿಗಳು ಮತ್ತು ರೈತ ಮುಖಂಡರು ಭಾಗವಹಿಸಲಿದ್ದಾರೆ. ಈಗಾಲೇ ಭೂ ಮಂಜೂರಾತಿ ರದ್ದು ಆಗಿರುವ ರೈತರು ಮತ್ತು ಅರಣ್ಯ ಇಲಾಖೆಯ 4/1 ಅಧಿಸೂಚನೆಯಿಂದ ತೊಂದರೆ ಅನುಭವಿಸುತ್ತಿರುವ ರೈತರು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಪಡೆಯಬೇಕು ಎಂದು ಮುಖಂಡ ಜಿ.ಕೆ.ಮಂಜಪ್ಪಯ್ಯ ಮನವಿ ಮಾಡಿದ್ದಾರೆ.
ಕಳಸ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ 18ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಯಲಿದೆ. ರಾಜ್ಯ ಹೈಕೋರ್ಟಿನಲ್ಲಿ ಇದೇ ವಿಚಾರಕ್ಕೆ ಮೇಲ್ಮನವಿ ದಾಖಲಿಸಿ ತಡೆಯಾಜ್ಷೆ ಪಡೆದಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
