ಕಳಸ:ಇಲ್ಲಿನ ರೋಟರಿ ಸಂಸ್ಥೆಯು ಪಟ್ಟಣದಲ್ಲಿ ಕುಡಿಯುವ ನೀರಿನ ಸುಸಜ್ಜಿತ ಘಟಕ ಸ್ಥಾಪಿಸಿದೆ. ಹೊರನಾಡು ರಸ್ತೆಯಲ್ಲಿ ಈ ಘಟಕ ಸ್ಥಾಪನೆ ಆಗಿದ್ದು ಕೆಪಿಎಸ್ ಶಾಲೆಯ ಬಸ್ ತಂಗುದಾಣಕ್ಕೆ ಹೊಂದಿಕೊಂಡಂತೆ ಇರುವ ನಿವೇಶನದಲ್ಲೇ ಕಾರ್ಯಾರಂಭಿಸಲಿದೆ.
6 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಘಟಕ ಸ್ಥಾಪಿಸಲಾಗಿದ್ದು ನೀರನ್ನು ಆರ್ಓ ಮತ್ತು ಯುವಿ ತಂತ್ರಜ್ಞಾನ ಬಳಸಿ ಶುದ್ದೀಕರಿಸಲಾಗುತ್ತದೆ.ಈ ಘಟಕದಿಂದ ಸ್ಥಳೀಯರ ಜೊತೆಗೆ ಪ್ರವಾಸಿಗರು ಕೂಡ ಶುದ್ಧ ಕುಡಿಯುವ ನೀರನ್ನು ಅತ್ಯಂತ ಕಡಿಮೆ ಬೆಲೆಗೆ ಪಡೆಯಬಹುದಾಗಿದೆ.
2000 ಲೀಟರ್ ಸಾಮಥ್ರ್ಯದ ಈ ಘಟಕದಲ್ಲಿ ಗಂಟೆಗೆ 500 ಲೀಟರ್ ಪರಿಶುದ್ಧ ನೀರು ಪಡೆಯಬಹುದಾಗಿದೆ.ಒಂದು ರೂಪಾಯಿ ಪಾವತಿಸಿ ಒಂದು ಲೀಟರ್ ನೀರನ್ನು ಪಡೆಯಬಹುದು. 20 ಲೀಟರ್ ನೀರು ಪಡೆಯಲು ಬಯಸುವವರು 5 ರೂಪಾಯಿ ಪಾವತಿಸಬೇಕಾಗುತ್ತದೆ.
ಕಳಸ ರೋಟರಿ ಸಂಸ್ಥೆಯ ಎಲ್ಲ ಸದಸ್ಯರ ದೇಣಿಗೆಯಿಂದ ಈ ಘಟಕ ಸ್ಥಾಪನೆ ಆಗಿದೆ. 14ರ ಭಾನುವಾರ ಈ ಘಟಕವನ್ನು ರೋಟರಿ ರಾಜ್ಯಪಾಲರಾದ ಪಾಲಾಕ್ಷ ಉದ್ಘಾಟನೆ ಮಾಡಲಿದ್ದಾರೆ. ಹಿರಿಯರಾದ ರಾಜಗೋಪಾಲ ಜೋಷಿ,ಮಂಜುನಾಥ್, ಯೋಗೀಶ್, ಕಾರ್ಯದರ್ಶಿ ವಿಶಾಲ್ ನೋಟದ ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ರೋಟರಿ ಅಧ್ಯಕ್ಷ ಹೆಚ್.ಜಿ. ಮಹೇಂದ್ರ ತಿಳಿಸಿದ್ದಾರೆ.
