ಕಳಸ:ಇಲ್ಲಿನ ರೋಟರಿ ಸಂಸ್ಥೆಯು ಪಟ್ಟಣದ ಹೊರನಾಡು ರಸ್ತೆಯಲ್ಲಿ ಸ್ಥಾಪಿಸಿರುವ ಕುಡಿಯುವ ನೀರಿನ ಘಟಕವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು. ರೋಟರಿ ಸಂಸ್ಥೆಯ ಹಾಲಿ ಅಧ್ಯಕ್ಷ ಹೆಚ್.ಜಿ.ಮಹೇಂದ್ರ ಅವರ ಕನಸಿನ ಯೋಜನೆಯಾದ ಈ ಘಟಕವು ವರ್ಷಗಳ ಕಾಲ ಜನರ ಬಾಯಾರಿಕೆ ತಣಿಸುವ ನಿರೀಕ್ಷೆ ಇದೆ.
ರೋಟರಿ ರಾಜ್ಯಪಾಲ ಪಾಲಾಕ್ಷ 6 ಲಕ್ಷ ರೂಪಾಯಿ ವೆಚ್ಚದ ನೀರಿನ ಘಟಕವನ್ನು ಉದ್ಘಾಟಿಸಿದರು. ಕೈಗೆ ಎಟುಕುವ ದರದಲ್ಲೇ ಶುದ್ಧ ಕುಡಿಯುವ ನೀರನ್ನು ಸಾರ್ವಜನಿಕರಿಗೆ ಮತ್ತು ಪ್ರವಾಸಿಗಳಿಗೆ ಪೂರೈಸುವ ಕಳಸ ರೋಟರಿ ಸಂಸ್ಥೆಯ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ರೋಟರಿ ಅಧ್ಯಕ್ಷ ಹೆಚ್.ಜಿ.ಮಹೇಂದ್ರ, ಕಾರ್ಯದರ್ಶಿ ವಿಶಾಲ್ ನೋಟದ, ಪದಾಧಿಕಾರಿಗಳಾದ ರಾಜಗೋಪಾಲ ಜೋಷಿ, ರಾಜಗೋಪಾಲ ಜೋಷಿ, ಕೆ.ಕೆ.ಬಾಲಕೃಷ್ಣ ಭಟ್, ಕುಮಾರಸ್ವಾಮಿ, ಕಿರಣ್ ಶೆಟ್ಟಿ, ಸುಗಮ್, ಗಿರಿಜಾಶಂಕರ ಜೋಷಿ ,ಪಣೀಶ್, ಪ್ರಸನ್ನ, ಅಭಿನಂದನ್, ರಿತೇಶ್, ಮುಖಂಡರಾದ ಹಿತ್ಲುಮಕ್ಕಿ ರಾಜೇಂದ್ರ, ಶ್ರೀಕಾಂತ್, ಗೋಪಾಲಗೌಡ, ಕೆ.ಆರ್.ಪ್ರಭಾಕರ್, ಭಾಸ್ಕರ್ ಮತ್ತಿತರರು ಭಾಗವಹಿಸಿದ್ದರು.
