40 ವರ್ಷದ ಬಳಿಕ ಜಾರುಕುಣಿಗೆ ಕಾಂಕ್ರೀಟ್ ರಸ್ತೆ ಭಾಗ್ಯ
ಕಳಸ:ಸಂಸೆ ಪಂಚಾಯಿತಿ ವ್ಯಾಪ್ತಿಯ ಜಾರುಕುಣಿ ಪ್ರದೇಶಕ್ಕೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಸಲಾಗಿದ್ದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.
ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದ್ದು ಅಲ್ಲಿನ ಕೃಷಿಕ ಕುಟುಂಬಗಳು ಕಾಮಗಾರಿ ಬಗ್ಗೆ ತೀವ್ರ ಸಂತೃಪ್ತಿ ತೋರಿಸಿದ್ದಾರೆ.
ಕಳೆದ 40 ವರ್ಷಗಳಿಂದ ನಮ್ಮ ಪ್ರದೇಶಕ್ಕೆ ರಸ್ತೆ ಅಭಿವೃದ್ಧಿ ಬಗ್ಗೆ ಮಾಡಿದ್ದ ಎಲ್ಲ ಮನವಿಗಳು ಮೂಲೆ ಸೇರಿದ್ದವು.ಆದರೆ ಈ ಬಾರಿ ಶಾಸಕಿ ನಯನಾ ಮೋಟಮ್ಮ ನಮ್ಮ ಗ್ರಾಮದ ರಸ್ತೆಗೆ 20 ಲಕ್ಷ ದೊರಕಿಸಿ ಗುಣಮಟ್ಟದ ಕಾಮಗಾರಿ ನಡೆಯಲು ಕಾರಣರಾಗಿದ್ದಾರೆ.ಇದರಿಂದ ನಮಗೆ ಅತ್ಯಂತ ಆನುಕೂಲ ಆಗಲಿದೆ. ಶಾಸಕಿ ನಯನಾ ಮೋಟಮ್ಮ ಅವರಿಗೆ ಅಭಿನಂದನೆಗಳು ಎಂದೂ ಗ್ರಾಮಸ್ಥರು ತಿಳಿಸಿದ್ದಾರೆ.
ಇದರೊಂದಿಗೆ ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ, ಮುಖಂಡರಾದ ಸುಜಿತ್, ಶ್ರೀನಿವಾಸ್, ಉದಯ್, ರಾಜಪ್ಪ ಗೌಡ ಮುಳ್ಳೋಡಿ ಅವರಿಗೂ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.
