ಕಳಸ:ಇಲ್ಲಿನ ಕಳಸೇಶ್ವರ ಗ್ರಾಮ ಅರಣ್ಯ ಸಮಿತಿಯ ಮಹಾಮಂಡಳಿಯ ಸಭೆ ಮತ್ತು ನೂತನ ಪದಾಧಿಕಾರಿಗಳ ಚುನಾವಣೆ ಇದೇ 25ರಂದು ನಡೆಯಲಿದೆ.
ಮಾವಿನಕೆರೆ ಗ್ರಾಮ ವ್ಯಾಪ್ತಿಯ ನಿವಾಸಿಗಳು ಸಮಿತಿಯ ಸದಸ್ಯತ್ವ ಹೊಂದಿದ್ದರೆ ಮಾತ್ರ ಮತದಾನ ಮಾಡಲು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಹೊಂದಿರುತ್ತಾರೆ.ಹೊಸದಾಗಿ ಸದಸ್ಯತ್ವ ಪಡೆಯಲು ಬಯಸುವವರು ಇದೇ 17ರ ಒಳಗೆ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸದಸ್ಯತ್ವ ಪಡೆಯಬಹುದು. 2 ರೂಪಾಯಿ ಸದಸ್ಯತ್ವ ಶುಲ್ಕ ಮತ್ತು ಆಧಾರ್ ಕಾರ್ಡ್ ಪ್ರತಿ ನೀಡಬೇಕು ಎಂದು ಸಮಿತಿಯ ಸದಸ್ಯ ಕಾರ್ಯದರ್ಶಿ ಹರೀಶ್ ತಿಳಿಸಿದ್ದಾರೆ.
ಸಮಿತಿಗೆ ಒಬ್ಬ ಅಧ್ಯಕ್ಷ ಮತ್ತು 10 ನಿರ್ದೇಶಕರ ಆಯ್ಕೆಗೆ ಅವಕಾಶ ಇದ್ದು ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಲಭ್ಯವಿದೆ. ಹೆಚ್ಚಿನ ಮಾಹಿತಿಗೆ ಸಮಿತಿಯ ಸಂಪನ್ಮೂಲ ವ್ಯಕ್ತಿ ಜೆ.ನಾಗರಾಜ್ ಅವರನ್ನು 9731160675 ಮೂಲಕ ಸಂಪರ್ಕಿಸಬಹುದಾಗಿದೆ.
