ಕಳಸ:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಲ್ಲಿನ ಇಬ್ಬರು ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ 10ನೇ ಮತ್ತು 12 ನೇ ಸ್ಥಾನ ಗಳಿಸಿದ್ದಾರೆ.
ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಂಜನಾ ವಿ.ಸಿ. ವಿಜ್ಞಾನ ವಿಭಾಗದಲ್ಲಿ 590 ಅಂಕ (ಶೇ.98) ಗಳಿಸಿ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನ ಗಳಿಸಿದ್ದಾರೆ. ಇವರು ಹಳುವಳ್ಳಿಯ ಜೇನುತಜ್ಞ ವಲ್ಲಿಕುಡಿಗೆ ಚಂದ್ರಶೇಖರ್ ಅವರ ಪುತ್ರಿ..

ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಸೆಂಟ್ ಆಗ್ನೆಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹೆಚ್.ವಿ.ಕೌಶವಿ 589 ಅಂಕ (ಶೇ.98) ಪಡೆದು ರಾಜ್ಯದಲ್ಲೇ 12ನೇ ಸ್ಥಾನ ಪಡೆದಿದ್ದಾರೆ.ಇವರು ಹೊಸೂರಿನ ದಿ.ಧರಣೇಗೌಡ ಕುಟುಂಬದ ವೆಂಕಟೇಶ ಗೌಡ, ಯಾದವಿ ದಂಪತಿಯ ಪುತ್ರಿ.
