ಕಳಸ:ಇಲ್ಲಿನ ಕೋಟಿತೀರ್ಥದ ಬಳಿಯ ಶ್ರೀ ಇಲ್ವಲೇಶ್ವರ, ದುರ್ಗಾಂಬಾ ಮತ್ತು ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಲಿದೆ.
ಇಂದು ಸಂಜೆ 5 ಗಂಟೆಗೆ ವಾಸ್ತುಹೋಮ, ಶಾಂತಿ, ಪ್ರಾಯಶ್ಚಿತ್ತ ಹೋಮ, ಕಲಶ ಪ್ರತಿಷ್ಟೆ, ಬಿಂಬ ಶುದ್ದಿ ನೆರವೇರಲಿದೆ.
ನಾಳೆ ಬೆಳಿಗ್ಗೆ 11.45ರ ಶುಭ ಲಗ್ನದಲ್ಲಿ ಶ್ರೀ ಇಲ್ವಲೇಶ್ವರ, ದುರ್ಗಾಂಬಾ ಮತ್ತು ಮಹಾಗಣಪತಿ ದೇವರುಗಳ ಅಷ್ಟಬಂಧ, ಪುನರ್ ಪ್ರತಿಷ್ಟೆ, ಜೀವ ಕುಂಭಾಭಿಷೇಕ, ಕಲಶಾಭಿಷೇಕ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ಭಕ್ತರು ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.
