ಕಳಸ:ಹೊರನಾಡು ಗ್ರಾಮದ ಕವನಳ್ಳದ ನಿವಾಸಿ ಆಗಿರುವ ಅನಿಶಾ ಡಿಸೋಜ ನೇಪಾಳದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಯುವ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಸಾಧನೆ ತೋರಿದ್ದಾರೆ.
ಹಲವಾರು ರಾಷ್ಟ್ರಗಳ ಪಟುಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಅವರು ಶಾಟ್ಪುಟ್ (ಗುಂಡು ಎಸೆತದಲ್ಲಿ) ಅಗ್ರಸ್ಥಾನ ಗಳಿಸಿದ್ದಾರೆ.ಇದಕ್ಕೂ ಮುನ್ನ ನವದೆಹಲಿಯಲ್ಲಿ ನಡೆದಿದ್ದ ರಾಷ್ಟ್ರೀಯ ಯುವ ಅಥ್ಲೆಟಿಕ್ಸ್ ಕೂಟದಲ್ಲಿ ಅವರು ಚಿನ್ನದ ಪದಕ ಗಳಿಸಿದ್ದರು.ಕವನಳ್ಳದ ಕ್ಲೆಮೆಂಟ್ ಡಿಸೋಜ ಮತ್ತು ಆಶಾ ಡಿಸೋಜ ದಂಪತಿಯ ಪುತ್ರಿಯಾದ ಅನಿಶಾ ಈಗ ಉಜಿರೆ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಆಗಿದ್ದಾರೆ.
