ಕಳಸ:ಹಿರೇಬೈಲಿನ ಇಡಕಿಣಿ ಸಹಕಾರ ಸಂಘದ 12 ನಿರ್ದೇಶಕರ ಪೈಕಿ 11 ಸ್ಥಾನವನ್ನು ಜೆಡಿಎಸ್-ಬಿಜೆಪಿ ಮೈತ್ರಿಕೂಟ ಜಯಿಸಿದೆ.
ಮತದಾನದ ನಂತರ ಕೆಲ ತಾಂತ್ರಿಕ ಕಾರಣಗಳಿಗೆ ಹೈಕೋರ್ಟ್ ಫಲಿತಾಂಶಕ್ಕೆ ತಡೆ ನೀಡಿತ್ತು.ತಿಂಗಳ ನಂತರ ಆ ತಡೆ ನಿವಾರಣೆ ಆಗಿದ್ದು ಶನಿವಾರ ಫಲಿತಾಂಶ ಘೋಷಣೆ ಮಾಡಲಾಯಿತು.
ಮೈತ್ರಿಕೂಟದ ಗಿರೀಶ್ ಹೆಮ್ಮಕ್ಕಿ, ಹಿರೇಬೈಲು ಗೋವರ್ಧನ್, ಬರಗಲ್ ಭೋಜರಾಜ್, ಎಡೂರು ವಿದ್ಯಾಸಾಗರ್, ಎಂ.ಸಿ.ಸಂತೋಷ್ ಮರಸಣಿಗೆ, ನಾಗೇಶ್ ಇಡಕಿಣಿ. ಹರೀಶ್ ಹಿರೇಬೈಲ್, ರಾಜೇಶ್ ಮರಸಣಿಗೆ, ಸಂಗೀತ ಹೆಮ್ಮಕ್ಕಿ, ವೃಂದಾವತಿ ಹೆಮ್ಮಕ್ಕಿ ಮತ್ತು ವೈಶಾಲಿ ಇಡಕಿಣಿ ಜೆಡಿಎಸ್-ಬಿಜೆಪಿ ಬೆಂಬಲದೊಂದಿಗೆ ಜಯಗಳಿಸಿದ್ದಾರೆ. ಮರಸಣಿಗೆಯ ವೆರೋನಿಕಾ ಕ್ರಾಸ್ತಾ ಕಾಂಗ್ರೆಸ್ ಬೆಂಬಲದೊಂದಿಗೆ ಜಯಗಳಿಸಿದ ಏಕೈಕ ನಿರ್ದೇಶಕರಾಗಿದ್ದಾರೆ.
ಇದೇ 28ರಂದು ಸಂಘದ ಅದ್ಯಕ್ಷರ ಚುನಾವಣೆ ನಡೆಯಲಿದೆ.
