ಕಳಸ:ಇಲ್ಲಿನ ಕಳಸ ರೋಟರಿ ಸಂಸ್ಥೆ ಅಧ್ಯಕ್ಷರಾಗಿ ಜಿ.ಮಹೇಂದ್ರ ಹಾಗೂ ಕಾರ್ಯದರ್ಶಿಯಾಗಿ ವಿಶಾಲ್ ನೋಟದ ಅಧಿಕಾರ ಸ್ವೀಕರಿಸಿದ್ದಾರೆ.
ರೋಟರಿ ಸಭಾಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ರೋಟರಿ ಸಹಾಯಕ ಗವರ್ನರ್ ರಾಜಗೋಪಾಲ ಜೋಷಿ, ಮಹೇಂದ್ರ ಮತ್ತು ವಿಶಾಲ್ ಅವರಿಗೆ ಅಧಿಕಾರಿ ಹಸ್ತಾಂತರದ ವಿಧಿ ನೆರವೇರಿಸಿದರು. ಜೋನಲ್ ಲೆಫ್ಟಿನೆಂಟ್ ಯೋಗೀಶ್ ಎಂ.ಸಿ. ಇದ್ದರು.ಆನಂತರ ಮಾತನಾಡಿದ ನೂತನ ಅಧ್ಯಕ್ಷ ಮಹೇಂದ್ರ, ಈ ಸಾಲಿನಲ್ಲಿ ಯಾವುದಾದರೂ ಮಾದರಿ ಚಟುವಟಿಕೆ ಮೂಲಕ ಸಮಾಜಮುಖಿ ಕೆಲಸ ಮಾಡುವ ಹುಮ್ಮಸ್ಸು ಇದೆ ಎಂದರು.

ರೋಟರಿ ನಿರ್ಗಮಿತ ಅಧ್ಯಕ್ಷ ಕೆ.ಆರ್.ಪ್ರಭಾಕರ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಶಾಸಕಿ ನಯನಾ ಮೋಟಮ್ಮ ನೆರವಿನಿಂದ ಕಳಸೇಶ್ವರ ದೇವಸ್ಥಾನದ ಕಲಾ ಮಂದಿರಕ್ಕೆ ಮೇಲ್ಛಾವಣಿ ಕಾಮಗಾರಿ ನಡೆಸಿ ಶಾಶ್ವತ ಕೆಲಸ ಮಾಡಿದ ಖುಷಿ ಇದೆ ಎಂದರು.
ನಿರ್ಗಮಿತ ಕಾರ್ಯದರ್ಶಿ ಪಿ.ಎ.ಕುಮಾರಸ್ವಾಮಿ ಕಳೆದ ಒಂದು ವರ್ಷದ ಅವಧಿಯ ಸಂಸ್ಥೆಯ ಕಾರ್ಯಚಟುವಟಿಕೆ ವರದಿ ಓದಿದರು. ಹೊರನಾಡಿನ ಜಿ.ಭೀಮೇಶ್ವರ ಜೋಷಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಕಳಸ ರೋಟರಿ ಸಂಸ್ಥೆ ಕಳೆದ 25 ವರ್ಷಗಳಲ್ಲಿ ಮಾಡಿರುವ ಸಾಮಾಜಿಕ ಚಟುವಟಿಕೆಯ ವಿಸ್ತಾರ ದೊಡ್ಡದು. ಸಮಾಜಮುಖಿಯಾಗಿ ಈ ಸಂಸ್ಥೆ ಕಳಸದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು.

ರಾಜಲಕ್ಷ್ಮಿ ಜೋಷಿ, ರಾಘವ, ಡಾ. ವಿಕ್ರಮ್ ಪ್ರಭು, ಕಾರ್ತಿಕ್ ಶಾಸ್ತಿ, ಕಿರಣ್ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಸುಹಾನ್ ಜೈನ್, ಸಂತೋಷ್ ಪೂಜಾರಿ, ಮನು, ಆದೀಶ್, ಆಂಟೋನಿ, ಗಿರಿಜಾಶಂಕರ ಜೋಷಿ, ಕೆ.ಕೆ. ಬಾಲಕೃಷ್ಣ ಭಟ್, ಪಣೀಶ್, ರಿತೇಶ್, ಬ್ರಹ್ಮದೇವ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.
ನಿರ್ಗಮಿತ ಅಧ್ಯಕ್ಷೆ ನಳಿನಾ ಪ್ರಸನ್ನ, ನಿರ್ಗಮಿತ ಕಾರ್ಯದರ್ಶಿ ಮಾಳವಿಕ ಪ್ರಭು ಮಾತನಾಡಿದರು. ಇನ್ನರ್ವೀಲ್ ನೂತನ ಅಧ್ಯಕ್ಷರಾಗಿ ಶ್ರೀವಾಣಿ ಸುಗಮ್, ಕಾರ್ಯದರ್ಶಿಯಾಗಿ ನಿತ್ಯಾ ಸಂದೀಪ್ ಅಧಿಕಾರ ಸ್ವೀಕರಿಸಿದರು.ಲೀನಾ ಅಭಿನಂದನ್, ಸ್ಮಿತಾ ಮಹೇಂದ್ರ, ನಳಿನಿ ಪ್ರಸನ್ನ, ಮಾಳವಿಕ ಪ್ರಭು, ಶ್ರುತಿ ಪಣೀಶ್, ಉಷಾ ಕುಮಾರ್,ಸಂಧ್ಯಾ ರಿತೇಶ್ ಪದಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು.

ಕಳಸ ಎಜುಕೇಶನ್ ಸಂಸ್ಥೆ ಕಾರ್ಯದರ್ಶಿ ಗೋಪಿನಾಥ ಪೈ, ಕೃಷಿಕ ಶ್ರೀಕಾಂತ್ ಹೆಬ್ಬಾರ್ ಮತ್ತು ಹೊರನಾಡು ದೇವಸ್ಥಾನದ ವ್ಯವಸ್ಥಾಪಕ ಶೇಷಾದ್ರಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
