ಕಳಸ:ಮಾವಿನಕೆರೆ ಎಸ್ಟೇಟಿನಲ್ಲಿ ಮರಗಸಿ ಮಾಡುವಾಗ ಮರದಿಂದ ಬಿದ್ದ ಕಾರ್ಮಿಕರೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ.
ತರೀಕೆರೆ ಮೂಲದ ಮಂಜ(53) ಎಂಬುವರು ಎತ್ತರದ ಮರವನ್ನು ಏರಿ ಮರಕಸಿ ಮಾಡುತ್ತಿದ್ದಾಗ ಆಯ ತಪ್ಪಿಬಿದ್ದಿದ್ದಾರೆ. 50 ಅಡಿ ಎತ್ತರದಿಂದ ಬಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.
ಕಳಸ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
