ಕಳಸ:ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದ ಕಾರ್ಮಿಕ ಕುಟುಂಬದ ಮನೆಯೊಂದರ ಮೇಲೆ ಅಕೇಶಿಯಾ ಮರ ಬಿದ್ದಿದೆ. ಮಧ್ಯರಾತ್ರಿ ಮರ ಬಿದ್ದಾಗ ಮನೆಯಲ್ಲಿ ಮಲಗಿದ್ದ ಪ್ರೇಮ ಅವರಿಗೆ ಗಾಯಗಳಾಗಿದ್ದು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಪಂಚಾಯಿತಿ ಸದಸ್ಯರಾದ ವಿಶ್ವನಾಥ್, ಗುಲಾಬಿ ರಾತ್ರಿಯೇ ಸ್ಥಳಕ್ಕೆ ತೆರಳಿ ಮರ ತೆಗೆಯಲು ಅಗತ್ಯ ಸಹಕಾರ ಕೊಟ್ಟಿದ್ದಾರೆ.ಮನೆ ಬಹುತೇಕ ಜಖಂಗೊಂಡಿದ್ದು, ಮನೆಯಲ್ಲಿದ್ದ ದಿನಬಳಕೆಯ ವಸ್ತುಗಳು ನಾಶವಾಗಿವೆ. ಸಂಸತ್ರ್ತ ಕುಟುಂಬವು ಪರಿಹಾರಕ್ಕಾಗಿ ಬೇಡಿಕೆ ಇಟ್ಟಿದೆ.ಪೊಲೀಸ್, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
