ಕಳಸ:ತಾಲ್ಲೂಕಿನಾದ್ಯಂತ ಗೋವುಗಳ ಕಳ್ಳತನ ಎಗ್ಗಿಲ್ಲದೆ ಸಾಗಿದ್ದು ಇದನ್ನು ತಡೆಯುವಂತೆ ಬಜರಂಗದಳ ಕಳಸ ಘಟಕ ಕಳಸ ಪೊಲೀಸರಿಗೆ ಮನವಿ ಸಲ್ಲಿಸಿದೆ.
ತಾಲ್ಲೂಕಿನ ಬಾಳೆಹೊಳೆ, ಹೊರನಾಡು, ಕಳಸ ಮತ್ತು ಹಿರೇಬೈಲಿನಲ್ಲಿ ಗೋವುಗಳನ್ನು ಕಳ್ಳರು ಕದ್ದು ಸಾಗಿಸುತ್ತಿರುವುದು ಗಮನಕ್ಕೆ ಬಂದಿದೆ.ಸರಕು ಸಾಗಣೆಯ ಪಿಕ್ ಅಪ್ಗಳ ಜೊತೆಗೆ ಜನರ ಓಡಾಟಕ್ಕೆ ಬಳಸುವ ವಾಹನಗಳಲ್ಲೂ ಜಾನುವಾರುಗಳನ್ನು ಕದ್ದು ಸಾಗಿಸಲಾಗುತ್ತಿದೆ ಎಂದು ಬಜರಂಗದಳ ತಿಳಿಸಿದೆ.
ಪ್ರತಿದಿನ ರಾತ್ರಿ 1 ಗಂಟೆಯಿಂದ ಬೆಳಗಿನ ಜಾವ 5 ಗಂಟೆ ಒಳಗೆ ಈ ಕಳ್ಳತನ ನಡೆಯುತ್ತಿದ್ದು ಪೊಲೀಸರು ಅಗತ್ಯ ಕ್ರಮ ವಹಿಸಿ ಗೋವುಗಳ ಕಳ್ಳತನ ತಡೆಯಬೇಕು ಎಂದೂ ಬಜರಂಗದಳ ಆಗ್ರಹಿಸಿದೆ.ಬಜರಂಗದಳ ಮುಖಂಡರಾದ ಅಜಿತ್ ಕುಲಾಲ್, ಸಂತೋಷ್ ಮೂಲ್ಯ ಮತ್ತಿತರರು ಕಳಸ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
