ಕಳಸ:ಕಳಸ ಸರ್ಕಾರಿ ಪದವಿಪೂರ್ವ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.93.63ರ ಭರ್ಜರಿ ಫಲಿತಾಂಶ ಪಡೆದಿದೆ.
ಕಾಲೇಜಿನ ಮೂರು ವಿಭಾಗಗಳ ಒಟ್ಟು 110 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 103 ವಿದ್ಯಾರ್ಥಿಗಳು ವಿವಿಧ ದರ್ಜೆಯಲ್ಲಿ ತೇರ್ಗಡೆ ಆಗಿದ್ದಾರೆ.15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಆಗಿದ್ದು 47 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು 11 ಅತ್ಯುನ್ನತ ಶ್ರೇಣಿ ಮತ್ತು 22 ಪ್ರಥಮ ದರ್ಜೆ ಗಳಿಸಿದ್ದು ಆ ವಿಭಾಗದಲ್ಲಿ ಶೇ.97.87 ಫಲಿತಾಂಶ ಬಂದಿದೆ ಎಂದು ಕಾಲೇಜಿನ ಪ್ರಾಂಶುಪಾಲ ಅನಂತಪದ್ಮನಾಭ ತಿಳಿಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸ್ವಾತಿ ಶೇ.94 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾರೆ.ವರ್ಷಿತಾ ಶೆಟ್ಟಿ ಶೇ.93, ದರ್ಶನ್ ಹಾಗೂ ಸೌಂದರ್ಯ ಶೇ.91, ದೀಕ್ಷಿತಾ ಮತ್ತು ಗಿರೀಶ ಶೇ.90 ಅಂಕ ಗಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶೇ.83 ಫಲಿತಾಂಶ ಬಂದಿದ್ದು ನೀಕ್ಷಿತಾ ಶೆಟ್ಟಿ ಶೇ.90 ಅಂಕ ಗಳಿಸಿ ಅಗ್ರಸ್ಥಾನಿ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 1 ಅತ್ಯುನ್ನತ ಮತ್ತು 5 ಪ್ರಥಮ ದರ್ಜೆಯ ಫಲಿತಾಂಶ ಬಂದಿದೆ.

ಕಲಾ ವಿಭಾಗದಲ್ಲಿ ಶೇ.92 ಫಲಿತಾಂಶ ಬಂದಿದ್ದು ರಂಜಿತಾ ಶೇ.90 ಅಂಕ ಗಳಿಸಿ ಅಗ್ರಸ್ಥಾನ ಗಳಿಸಿದ್ದಾರೆ.ಈ ವಿಭಾಗದಲ್ಲಿ ಮೂವರು ಅತ್ಯುನ್ನತ ದರ್ಜೆ ಹಾಗೂ 20 ವಿದ್ಯಾರ್ಥಿಗಳು ಪ್ರಥಮ ದರ್ಜೆಯ ಸಾಧನೆ ಮಾಡಿದ್ದಾರೆ.
