ಕಳಸ:ಇಲ್ಲಿನ ಜೆಇಎಂ ಶಾಲೆಯು ಬುಧವಾರ ನಡೆದ ಕಳಸ ವಲಯದ ಪ್ರೌಢಶಾಲೆಗಳ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಗಳಿಸಿದೆ.
ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಶ್ರೀನಿಧಿ 800 ಮೀಟರ್, 1500 ಮೀಟರ್ ಮತ್ತು 3000 ಮೀಟರ್ ಓಟದಲ್ಲಿ ಮೊದಲ ಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ಶಿಪ್ ಗಳಿಸಿದರು.

ಬಾಲಕಿಯರ ವಿಭಾಗದಲ್ಲಿ ಮಾನ್ವಿ ಶೆಟ್ಟಿ 200 ಮೀಟರ್, 400 ಮೀಟರ್ ಓಟ ಮತ್ತು ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಅಗ್ರಸ್ಥಾನ ಗಳಿಸಿ ವೈಯಕ್ತಿಕ ಚಾಂಪಿಯನ್ ಎನಿಸಿದರು.

ಬಾಲಕರ ವಿಭಾಗದ ಖೋಖೊ ಸ್ಪರ್ಧೆಯಲ್ಲಿ ಕೂಡ ಶಾಲೆಯು ಅಗ್ರಸ್ಥಾನ ಗಳಿಸಿತು.ಕಳಸ ಎಜುಕೇಶನ್ ಸೊಸೈಟಿ ಪದಾಧಿಕಾರಿಗಳು ಮತ್ತು ಶಾಲಾ ಶಿಕ್ಷಕರು, ಪೋಷಕರು ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
