ಕಳಸ:ಇಲ್ಲಿನ ಕಳಸ ಯುವಕ ಸಂಘವು ನವೆಂಬರ್ 17ರಂದು ಪಟ್ಟಣದಲ್ಲಿ ತಪಾಸಣೆ ಜೊತೆಗೆ ಹೃದಯ ತಪಾಸಣೆ, ಕಿಡ್ನಿ ಸಂಬಂಧಿತ ರೋಗಗಳು ಮತ್ತು ಸ್ತ್ರೀರೋಗಗಳ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ.
ಮಂಗಳೂರಿನ ಎಜೆ ಆಸ್ಪತ್ರೆ ಮತ್ತು ಕಳಸದ ಕಾವೇರಿ ಸ್ಮಾರಕ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಕಾವೇರಿ ಸ್ಮಾರಕ ಆಸ್ಪತ್ರೆಯಲ್ಲಿ ನವೆಂಬರ್ 17ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆರವರೆಗೆ ಶಿಬಿರ ನಡೆಯಲಿದೆ. ಎಜೆ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಲಿದೆ ಎಂದು ಯುವಕ ಸಂಘದ ಪ್ರಕಟಣೆ ತಿಳಿಸಿದೆ.
ಶಿಬಿರದಲ್ಲಿ ಹೃದ್ರೋಗಿಗಳಿಗೆ ಉಚಿತವಾಗಿ ಇಸಿಜಿ ಮತ್ತು ಮಹಿಳೆಯರಿಗೆ ಪಾಪ್ ಸ್ಮಿಯರ್ ಹಾಗೂ ಮ್ಯಾಮೋಗ್ರಫಿ ಪರೀಕ್ಷೆ ನಡೆಸಲಾಗುತ್ತದೆ.ಆಸಕ್ತರು ಶಿಬಿರದ ಉಪಯೋಗ ಪಡೆಯಲು ಟಿಟೂ ಥಾಮಸ್ 7022912291 ಅಥವಾ ವೀರೇಂದ್ರ 9886664196 ಅವರ ಬಳಿ ಹೆಸರು ನೊಂದಾಯಿಸಲು ಕೋರಲಾಗಿದೆ.
