ಕಳಸ:ಶಾಸಕಿ ನಯನಾ ಮೋಟಮ್ಮ ನಾಳೆ ಕಳಸ ತಾಲ್ಲೂಕು ಪ್ರವಾಸ ಮಾಡಲಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 10.30ಕ್ಕೆ ಹಿರೇಬೈಲಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2 ಕೊಠಡಿಗಳ ಉದ್ಘಾಟನೆ ಮಾಡಲಿದ್ದಾರೆ.ಆನಂತರ 11.30ಕ್ಕೆ ಕಳಸದ ಶಾಸಕರ ಕಚೇರಿಯಲ್ಲಿ ಆಪರೇಶನ್ ಸಿಂಧೂರದಲ್ಲಿ ಭಾಗವಹಿಸಿದ್ದ ಕಳಸದ ಯೋಧ ರಾಜಪ್ಪ ಅವರನ್ನು ಸನ್ಮಾನಿಸಲಾಗುತ್ತದೆ.
ಮಧ್ಯಾಹ್ನ 12ಕ್ಕೆ ಕೆಪಿಎಸ್ ಕಾಲೇಜಿನ ಮೂರು ಕೊಠಡಿಗಳ ಉದ್ಘಾಟನೆಯನ್ನೂ ನಯನಾ ಮೋಟಮ್ಮ ನೆರವೇರಿಸಲಿದ್ದಾರೆ. ಆನಂತರ ಶಾಸಕಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಶ್ವನಾಥ್ ತಿಳಿಸಿದ್ದಾರೆ.
