ಕಳಸ:ಇಲ್ಲಿನ ಕಳಸ ಯುವಕ ಸಂಘದ 30ನೇ ವಾರ್ಷಿಕೋತ್ಸವದ ಪ್ರಯುಕ್ತ ನವೆಂಬರ್ 1ರಂದು ಪಟ್ಟಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಮಂಗಳೂರಿನ ಎ.ಜೆ. ಆಸ್ಪತ್ರೆ ವೈದ್ಯರ ಮತ್ತು ತಂತ್ರಜ್ಞರ ನೆರವಿನೊಂದಿಗೆ ಶಿಬಿರವು ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.
ಕಣ್ಣು, ಕವಿ, ಮೂಗು, ಗಂಟಲು, ಮೂಳೆ, ಹೃದಯ ಮತ್ತು ಚರ್ಮದ ಸಮಸ್ಯೆ ಇರುವವರಿಗೆ ಉಚಿತ ತಪಾಸಣೆ ಮಾಡಲಾಗುತ್ತದೆ.
ಶಿಬಿರದಲ್ಲಿ ರಕ್ತದ ಸಕ್ಕರೆ ಮಟ್ಟ, ಇಸಿಜಿಯನ್ನು ಉಚಿತವಾಗಿ ಮಾಡಲಾಗುತ್ತದೆ. ಅರ್ಹ ಬಡವರಿಗೆ ಉಚಿತ ಕನ್ನಡಕವನ್ನೂ ವಿತರಿಸಲಾಗುತ್ತದೆ.
ಆಸಕ್ತರು ಅನಿಲ್ 9481226396, ವೀರೇಂದ್ರ 9886664196, ಯೋಗೀಶ್ ಭಠ್ 9448681545 ಅಥವಾ ಸತ್ಯೇಂದ್ರ 9448939986 ಅವರನ್ನು ಸಂಪರ್ಕಿಸಬಹುದು.
