ಕಳಸ:ಹೆಬ್ಬೊಳೆ ಸೇತುವೆ ನಿರ್ಮಾಣವಾದ ನಂತರ ಸಂಪರ್ಕ ಕಡಿದುಕೊಂಡು ಕಂಗಾಲಾಗಿದ್ದ ಅನೇಕ ಕುಟುಂಬಗಳ ನಿವಾಸಿಗಳಿಗೆ ಶನಿವಾರ ಸಮಾಧಾನ ಆಯಿತು. ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆಯ ನೂತನ ಸೇತುವೆ ಪಕ್ಕದಲ್ಲೇ ಕಿರುಸೇತುವೆ ನಿರ್ಮಾಣಕ್ಕೆ ಶನಿವಾರ ಗುದ್ದಲಿಪೂಜೆ ನೆರವೇರಿಸಲಾಯಿತು.

ಹೆಬ್ಬೊಳೆ ಸೇತುವೆ ನಿರ್ಮಾಣವಾದ ನಂತರ ಹಳೆ ಸೇತುವೆ ಪಕ್ಕದ ಅನೇಕ ಮನೆಗಳಿಗೆ, ಕೃಷಿ ಜಮೀನಿಗೆ ಸಂಪರ್ಕ ರಸ್ತೆ ಇಲ್ಲದಂತಾಗಿತ್ತು. ಈ ಬಗ್ಗೆ ಸ್ಥಳೀಯರು ತಕರಾರು ಎತ್ತಿದ್ದರು. ಈ ಬಗ್ಗೆ ಶಾಸಕಿ ನಯನಾ ಮೋಟಮ್ಮ ಅವರ ಗಮನ ಸೆಳೆದ ನಂತರ ವಿಶೇಷ ಅನುದಾನದಲ್ಲಿ 50 ಲಕ್ಷ ರೂಪಾಯಿ ಮಂಜೂರು ಮಾಡಿದ್ದರು.
ಕಾಂಗ್ರೆಸ್ ಮುಖಂಡರಾದ ಶ್ರೇಣಿಕ, ಹಿತ್ತಲಮಕ್ಕಿ ರಾಜೇಂದ್ರ, ಶುಕೂರ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಮದೇವ್, ರಫೀಕ್, ವೀರೇಂದ್ರ, ವಿಶ್ವನಾಥ್, ಪ್ರೇಮಾ ಭಾಗವಹಿಸಿದ್ದರು.
