ಕಳಸ:ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಗುಮ್ಮನಕಾನು ತೋಟದಲ್ಲಿ ಶುಕ್ರವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
16 ವರ್ಷ ವಯಸ್ಸಿನ ಮೌರ್ದಿನ್ ಮೃತ ದುರ್ದೈವಿ ಆಗಿದ್ದಾರೆ.
ಇಬ್ಬರು ಯುವಕರು ಮೊಬೈಲ್ ಚಾರ್ಜಿಗೆ ಹಾಕಿ ಮಲಗಿದ್ದರು ಎನ್ನಲಾಗಿದೆ. ಬೆಳಗಿನ ಜಾವ ಭಾರಿ ಮಳೆ ಜೊತೆಗೆ ಸಿಡಿಲು ಬಡಿದಾಗ ಮೌರ್ದಿನ್ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಹಿರೇಬೈಲಿನ ಸಾಮಾಜಿಕ ಕಾರ್ಯಕರ್ತ ಶರೀಫ್ ನೆರವಿನಿಂದ ಯುವಕನನ್ನು ಕಳಸ ಆಸ್ಪತ್ರೆಗೆ ಕರೆತರುವಾಗ ದಾರಿಮಧ್ಯೆಯೇ ಮೌರ್ದಿನ್ ಮೃತಪಟ್ಟಿದ್ದಾನೆ.
