ಕಳಸ:ಇಲ್ಲಿನ ಕೆಪಿಎಸ್ ಶಾಲೆಯ ಶಿಕ್ಷಕರ ತಂಡವು ಕೇರಳದ ತಿರುವನಂತಪುರದಲ್ಲಿ ನಡೆಯುತ್ತಿರುವ ಮೂರು ದಿನಗಳ ಅಂತರರಾಜ್ಯ ಕಾರ್ಯಾಗಾರದಲ್ಲಿ ಭಾಗವಹಿಸಿದೆ.
ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳನಾಡು, ಲಕ್ಷ್ಮದ್ವೀಪ ಮತ್ತು ಕೇರಳ ರಾಜ್ಯಗಳ ಆಯ್ದ ಶಾಲೆಗಳ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ. ಕಳಸ ಕೆಪಿಎಸ್ ಶಾಲೆಯು 2024-25ರಲ್ಲಿ ರಾಜ್ಯದ ಅತ್ಯುತ್ತಮ ಕೆಪಿಎಸ್ ಶಾಲೆ ಪ್ರಶಸ್ತಿ ಗಳಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಾಗಾರಕ್ಕೆ ಅವಕಾಶ ಸಿಕ್ಕಿದೆ.
ಅಂತರರಾಜ್ಯ ನಾಯಕತ್ವ ಬೆಳವಣಿಗೆ ಕಾರ್ಯಾಗಾರದಲ್ಲಿ ಕಳಸ ಕೆಪಿಎಸ್ ಶಾಲೆಯ ಉಪಪ್ರಾಂಶುಪಾಲ ಸುರೇಶ್, ಇಂಗ್ಲೀಷ್ ಶಿಕ್ಷಕ ಶಿವಕುಮಾರ್, ವಿಜ್ಞಾನ ಶಿಕ್ಷಕ ಲೋಕೇಶ್ ಸತೀಶ್ ಭಾಗವಹಿಸಿದ್ದಾರೆ.

ಕಳಸದ ತಂಡವು ಕಳಸ ಕೆಪಿಎಸ್ ಶಾಲೆಯು ತನ್ನ ಅಭಿವೃದ್ಧಿಯ ಹಾದಿಯಲ್ಲಿ ಕೈಗೊಂಡಿರುವ ಕೆಲಸಗಳನ್ನು ಸವಿವರವಾಗಿ ತಿಳಿಸಿತು. ಕಳಸ ಕೆಪಿಎಸ್ ಶಾಲೆಯು ಶಾಲಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯರ ಸಹಕಾರದೊಂದಿಗೆ ರಾಜ್ಯದಲ್ಲೇ ಮಾದರಿ ಕೆಪಿಎಸ್ ಶಾಲೆ ಹೇಗೆ ಆಗಿದೆ ಎಂಬುದನ್ನು ಕಳಸದ ಶಿಕ್ಷಕರು ವಿವರಿಸಿದರು. ಇದನ್ನು ದಕ್ಷಿಣ ಭಾರತದ ಎಲ್ಲ ಶಾಲೆಗಳ ಶಿಕ್ಷಕರು ಕೂತೂಹಲ ಮತ್ತು ಆಸಕ್ತಿಯಿಂದ ಕೇಳಿದರು.ಈ ಕಾರ್ಯಾಗಾರ ಗುರುವಾರದವರೆಗೂ ನಡೆಯಲಿದೆ.
