ಕಳಸ:ಮಕ್ಕಿತಲೆ ಕೃಷಿಕ ಕುಟುಂಬದ ಹಿರಿಯ ಜೀವ, ತಾಳ್ಮೆಯ ಪ್ರತಿರೂಪದಂತೆ ಇದ್ದ ಪದ್ಮಿಣಿಯಮ್ಮ ಮಂಗಳವಾರ ಸ್ವರ್ಗಸ್ಥರಾದರು.
ಕಳೆದ 2 ತಿಂಗಳಿಂದ ತೀವ್ರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರಿಗೆ ದಾನಿ ಮಕ್ಕಿತಲೆ ವರ್ಧಮಾನಯ್ಯ, ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಬ್ರಹ್ಮದೇವ, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಇದ್ದಾರೆ.
ಕಳಸ ತಾಲ್ಲೂಕಿನ ನೂರಾರು ಜನರು ಅವರ ಮನೆಗೆ ತೆರಳ ಮೃತರ ಅಂತಿಮ ದರ್ಶನ ಪಡೆದರು. ಅವರ ಮನೆಯ ಸಮೀಪದಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಯಿತು.
