ಕಳಸ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸೆ ವಲಯದ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನೇತ್ರಾವತಿ ಚಾರಣ ಮತ್ತು ಸ್ವಚ್ಛತಾ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಪ್ರವಾಸಿ ತಾಣವಾದ ನೇತ್ರಾವತಿ ಶಿಖರದ ಮಾರ್ಗದಲ್ಲಿ ಪ್ರವಾಸಿಗರು ಎಸೆದಿದ್ದ ಪ್ಲಾಸ್ಟಿಕ್ ಬಾಟಲುಗಳು, ಪ್ಲಾಸ್ಟಿಕ್ ಚೀಲಗಳನ್ನು ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸಂಗ್ರಹಿಸಿದರು. ಚಾರಣದ ಆರಂಭದಿಂದ ಅಂತ್ಯದ 6 ಕಿಮೀ ವರೆಗೂ ಎಲ್ಲ ತ್ಯಾಜ್ಯವನ್ನು ಸಂಗ್ರಹಿಸಿ ಪ್ಲಾಸ್ಟಿಕ್ ಮುಕ್ತ ಪ್ರವಾಸಿ ತಾಣ ಎಂಬ ಜಾಗೃತಿ ಮೂಡಿಸಲಾಯಿತು.

ಕಳಸ ವಲಯದ ಮೇಲ್ವಿಚಾರಕ ಮಂಜುನಾಥ್, ಸೇವಾ ಪ್ರತಿನಿಧಿಗಳಾದ ರಾಮ್ ಪ್ರಕಾಶ್, ಉಷಾ, ವಿನುತಾ, ಅಶ್ವಿನಿ, ವಿಪತ್ತು ನಿರ್ವಹಣಾ ಘಟಕದ ಸಂಯೋಜಕರು ಮತ್ತು ಸದಸ್ಯರಾದ ಅಶೋಕ್, ಚೇತನ್, ಸುಧಾಕರ್,ಶೈಲಜಾ, ಪದ್ಮಲತಾ, ತೇಜಸ್ ಜೈನ್, ಪ್ರಕಾಶ್, ಹೆರಾಲ್ಡ್, ಮಂಜುನಾಥ್ ಭಾಗವಹಿಸಿದ್ದರು.
