ಕಳಸ:ಹೊರನಾಡು ಗ್ರಾಮ ಪಂಚಾಯಿತಿಯು ಈ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ.
ಗ್ರಾಮದ ಸ್ವಚ್ಛತೆ, ಮೂಲಸೌಕರ್ಯ, ಮಹಿಳೆ ಮತ್ತು ಮಕ್ಕಳ ಸ್ನೇಹಿ ಆಡಳಿತ, ಹಣಕಾಸಿನ ವಿಷಯ, ಉತ್ತಮ ಆಡಳಿತ, ಹಸಿರು ಗ್ರಾಮ ಮುಂತಾದ ವಿಷಯಗಳನ್ನು ಪರಿಗಣಿಸಿ ಹೊರನಾಡು ಗ್ರಾಮವನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಇದು ಕಳಸ ತಾಲ್ಲೂಕು ಮಟ್ಟದಲ್ಲಿ ಪ್ರಶಸ್ತಿ ಪಡೆದ ಪಂಚಾಯಿತಿ ಆಗಿದೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹೊರನಾಡು ಪಂಚಾಯಿತಿ ಅಧ್ಯಕ್ಷ ಮಧು ಪ್ರಸಾದ್, ಅಭಿವೃದ್ಧಿ ಅಧಿಕಾರಿ ಅರುಣ್ ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು 5 ಲಕ್ಷ ರೂಪಾಯಿ ನಗದು ಮತ್ತು ಪಾರಿತೋಷಕ ಹೊಂದಿದೆ.
