ಕಳಸ:ತಾಲ್ಲೂಕಿನ ಹೊರಗುತ್ತಿಗೆ ನೌಕರರು ಕಳಸದಲ್ಲಿ ಭಾನುವಾರ ಸಭೆ ನಡೆಸಿ ಸಂಘಟನೆ ಬಲಪಡಿಸುವ ಸೂಚನೆ ನೀಡಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ನೌಕರರು ತಮ್ಮ ಹಕ್ಕುಗಳಿಗೆ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಕಳಸ ತಾಲ್ಲೂಕು ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಮಂಜು ಪೃಥ್ವಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಹೊರಗುತ್ತಿಗೆ ನೌಕರರ ಸಭೆಯಲ್ಲಿ ಮಾತನಾಡಿದ ಸಂಘದ ಉಪಾಧ್ಯಕ್ಷ ಗಿರೀಶ್ ಶೃಂಗೇರಿ, ಎಲ್ಲ ಹೊರಗುತ್ತಿಗೆ ನೌಕರರನ್ನು ಸಂಘಟಿಸಿ ಈ ಸಮಿತಿ ರಚಿಸಲಾಗಿದೆ. ನೌಕರರ ಹಿತ ಕಾಯಲು ಸಂಘ ಸಜ್ಜಾಗಬೇಕು ಎಂದರು.ಕಳಸ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಪೃಥ್ವಿ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರದೀಪ್, ಜಿಲ್ಲಾ ನಿರ್ದೇಶಕ ಮಣಿ, ರಾಜ್ಯ ಘಟಕದ ನಿರ್ದೇಶಕ ದರ್ಶನ್, ಕಳಸ ಘಟಕದ ವಿವಿಧ ಪದಾಧಿಕಾರಿಗಳ ಮತ್ತು ಹೊರಗುತ್ತಿಗೆ ನೌಕರರು ಭಾಗವಹಿಸಿದ್ದರು.
