ಕಳಸ: ತಾಲ್ಲೂಕಿನಾದ್ಯಂತ ವೈಟ್ ಬೋರ್ಡ್ ಖಾಸಗಿ ವಾಹನಗಳು ಬಾಡಿಗೆ ವಾಹನಗಳ ಕೆಲಸ ಮಾಡುತ್ತಿದ್ದು ಅಕ್ರಮ ನಡೆಯುತ್ತಿದೆ ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಟ್ರೇಡ್ ಯೂನಿಯನ್ ಆರೋಪಿಸಿದೆ.
ಈ ಬಗ್ಗೆ ಕಳಸ ಪೊಲೀಸರಿಗೆ ಯೂನಿಯನ್ ಪದಾಧಿಕಾರಿಗಳಾದ ಈಶ್ವರ್, ಮಂಜುನಾಥ್, ಸುನಿಲ್ ಮತ್ತಿತರರು ದೂರು ಸಲ್ಲಿಸಿದ್ದು ಅಕ್ರಮ ವಾಹನಗಳ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.
ಕಳಸ ತಾಲ್ಲೂಕಿನಲ್ಲಿ 35ಕ್ಕೂ ಹೆಚ್ಚು ಅಧಿಕೃತ ಟ್ಯಾಕ್ಸಿಗಳು ಇದ್ದು ಸರ್ಕಾರಕ್ಕೆ ಪ್ರತಿವರ್ಷ ಸಾವಿರಾರು ರೂಪಾಯಿ ತೆರಿಗೆ, ವಿಮೆ ಮತ್ತಿತರ ಹಣ ಪಾವತಿ ಮಾಡುತ್ತಿದ್ದೇವೆ. ಆದರೆ ಅನೇಕ ಅನಧಿಕೃತ ಟ್ಯಾಕ್ಸಿಗಳು ಯಾವುದೇ ತೆರಿಗೆ ಪಾವತಿ ಮಾಡದೆ ಅಕ್ರಮವಾಗಿ ಬಾಡಿಗೆ ಮಾಡುತ್ತಿವೆ.ಇವರು ಕಡಿಮೆ ದರಕ್ಕೆ ಬಾಡಿಗೆ ಮಾಡುತ್ತಿದ್ದು ಅಧಿಕೃತ ಟ್ಯಾಕ್ಸಿಗಳಿಗೆ ಸ್ಪರ್ಧೆ ಒಡ್ಡುತ್ತಿದ್ದಾರೆ.
ಇದನ್ನೆಲ್ಲ ಪರಿಗಣಿಸಿ ಅಕ್ರಮವಾಗಿ ಬಾಡಿಗೆ ಮಾಡುವ ವೈಟ್ ಬೋರ್ಡ್ ವಾಹನಗಳ ಮೇಲೆ ಮೋಟಾರು ವಾಹನ ಕಾಯ್ದೆಯಲ್ಲಿ ಕ್ರಮ ವಹಿಸಬೇಕು ಎಂದು ಕಳಸ ಠಾಣಾಧಿಕಾರಿ ಚಂದ್ರಶೇಖರ್ ಅವರಲ್ಲಿ ಯೂನಿಯನ್ ಪದಾಧಿಕಾರಿಗಳು ಮನವಿ ಮಾಡಿದರು.
