ಕಳಸ:ಇಲ್ಲಿನ ಬಿಂಧುಮಾಧವ ಸ್ಥಾನಿಕ ಶಿವ ಬ್ರಾಹ್ಮಣ ಸಂಘದ ವತಿಯಿಂದ ಆಟಿಡೊಂಜಿ ಕೂಟ ಭಾನುವಾರ ಆಯೋಜಿಸಲಾಗಿತ್ತು.
ಕೆಸರು ಗದ್ದೆ ಓಟ, ಹಗ್ಗಜಗ್ಗಾಟದಂತಹ ಕ್ರೀಡೆಗಳು ಜನರ ಉತ್ಸಾಹ ಹೆಚ್ಚಿಸಿತ್ತು. ಮಲೆನಾಡಿನ ಮಳೆಗಾಲದ ತಿಂಡಿಗಳು ನೆರೆದಿದ್ದವರ ನಾಲಿಗೆಗೆ ಸಂತಸ ತಂದಿತ್ತು.ವಿವಿಧ ತಂಡಗಳು ನೃತ್ಯ ಪ್ರದರ್ಶನ ನೀಡಿದವು. ಕಾರ್ಯಕ್ರಮದ ಅಂತ್ಯದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಪ್ರಮುಖರಾದ ರಾಮಚಂದ್ರ ಹೆಬ್ಬಾರ್, ಭಾಸ್ಕರ್, ದಿವಾಕರ್ ರಾವ್, ಪೂರ್ಣಚಂದ್ರ ಭಾಗವಹಿಸಿದ್ದರು.

ಮಲೆನಾಡಿನ ಸಂಸ್ಕ್ರತಿ ಎತ್ತಿಹಿಡಿಯುವ ಜೊತೆಗೆ ಜನರಲ್ಲಿ ಒಗ್ಗಟ್ಟನ್ನು ಕೂಡ ಇಂತಹ ಕಾರ್ಯಕ್ರಮ ಮೂಡಿಸುತ್ತದೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.
