ಕಳಸ:ತೋಟದೂರು ಕೃಷಿ ಮತ್ತು ಪತ್ತಿನ ಸಹಕಾರ ಸಂಘವು ಕಳೆದ ಸಾಲಿನಲ್ಲಿ 13 ಕೋಟಿ ರೂಪಾಯಿ ವ್ಯವಹಾರ ನಡೆಸಿ 8.5 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹಿತ್ತಲಮಕ್ಕಿ ರಾಜೇಂದ್ರ ಪ್ರಸಾದ್ ತಿಳಿಸಿದರು.
ಸಂಘದ ಎರಡನೇ ವರ್ಷದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಈ ವರ್ಷ 3.60 ಕೋಟಿ ಮೊತ್ತದ 27 ಸಾವಿರ ಚೀಲ ಗೊಬ್ಬರ ಮಾರಾಟ ಮಾಡಿದ್ದು ಸದ್ಯದಲ್ಲೇ ಪಡಿತರ ವಿತರಣೆಗೆ ಅರ್ಹತೆ ಪಡೆದಿದ್ದೇವೆ ಎಂದರು.
ಸಂಘವು 2026-27ನೇ ಸಾಲಿಗೆ ಸಾಲ ವಿತರಿಸಲು ಕ್ರಮ ವಹಿಸಿದೆ. ಈ ವರ್ಷ ಸಂಘ 25 ಕೋಟಿ ರೂಪಾಯಿ ವ್ಯವಹಾರ ನಡೆಸುವ ಗುರಿ ಹೊಂದಿದೆ. ಸಂಘಕ್ಕಾಗಿ ಸೂಕ್ತ ನಿವೇಶನಕ್ಕೆ ಅರ್ಜಿ ಸಲ್ಲಿಸಲಾಗಿದೆ. ದಾನಿಗಳ ಮೂಲಕವೂ ನಿವೇಶನ ಪಡೆಯುವ ಯತ್ನ ಸಾಗಿದೆ.ಮುಂದಿನ ಸಾಲಿನಲ್ಲಿ ಸಂಘವು ಗೋದಾಮು ಮತ್ತು ಸುಸಜ್ಜಿತ ಕಟ್ಟಡ ನಿರ್ಮಿಸುವ ಇರಾದೆ ಹೊಂದಿದೆ ಎಂದರು.
ಕಸ್ತೂರಿರಂಗನ್ ವರದಿಯಿದ ತನೂಡಿ ಗ್ರಾಮವನ್ನು ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಕೂಡ ಸಲ್ಲಿಸಲಾಗಿದೆ ಎಂದರು.ಸಂಘದ ಉಪಾದ್ಯಕ್ಷ ಸದಾನಂದ ಭಟ್, ನಿರ್ದೇಶಕರಾದ ವಿಜಯೇಂದ್ರ, ವೆಂಕಟೇಶ್, ಸುಬ್ರಮಣ್ಯ, ಅರುಣ್ ಕುಮಾರ್, ಸುನೀತಾ, ಶ್ರೀಮತಿ, ಸುಧಾಕರ್, ಪರಮೇಶ್ವರ, ವಾಸು, ಸದಾನಂದ ಆಚಾರ್ಯ, ಮುಖ್ಯ ಕಾರ್ಯನಿರ್ವಾಹಕ ಸಂಕರ್ಷಣ ಭಾಗವಹಿಸಿದ್ದರು.
