ಕಾಫಿ ಸಂಶೋಧನಾ ಕೇಂದ್ರ(ಸಿಆರ್ಎಸ್): ಕಾಫಿ ಬೆಳೆಗಾರರಿಗೆ ಕಾಫಿ ಸಂಶೋಧನಾ ಕೇಂದ್ರದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
7 ಬೀನ್ ತಂಡದ ಸದಸ್ಯರು ಮತ್ತು 140 ಬೆಳೆಗಾರರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿಆರ್ಎಸ್ ಜಂಟಿ ನಿರ್ದೇಶಕ ಡಾ.ಜೆ.ಎಸ್.ನಾಗರಾಜ್ ಸಂಶೋಧನಾ ಕೇಂದ್ರದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.

ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ. ಕಾಫಿ ಬೆಳೆಯ ಪ್ರಗತಿಯ ಬಗೆಗಿನ ಮುಂದಿನ ಘಟ್ಟಗಳ ಬಗ್ಗೆ ಮಾತನಾಡಿದರು.7 ಬೀನ್ ಅಧ್ಯಕ್ಷ ಡಾ.ಎನ್.ಕೆ.ಪ್ರದೀಪ್ ಕಾಫಿ ಬೆಳೆಯ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾತನಾಡಿದರು.
ಸಂಶೋಧನಾ ಕೇಂದ್ರದ ವಿಜ್ಞಾನಿ ದಿವ್ಯಾ ಕೆ.ದಾಸ್ ರೊಬಸ್ಟಾ ಕಾಫಿ ಗಿಡಗಳ ಕ್ಲೋನಲ್ ಪ್ರೊಪಗೇಷನ್ ಬಗ್ಗೆ ಮಾಹಿತಿ ನೀಡಿದರು.ಕಾಫಿ ಕೊಳೆ ರೋಗ ಮತ್ತು ಅದರ ನಿರ್ವಹಣೆ ಬಗ್ಗೆ ಸಸ್ಯರೋಗ ಶಾಸ್ತ್ರಜ್ಞ ಡಾ.ಮಧು ಮಾಹಿತಿ ನೀಡಿದರು.

ಕೃಷಿ ರಸಾಯನ ಶಾಸ್ತ್ರ ವಿಜ್ಞಾನಿ ಚಂದ್ರಶೇಖರ್ ಕಾಫಿ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.7 ಬೀನ್ ತಂಡದ ಮುಖ್ಯಸ್ಥರು ಮತ್ತು ಬೆಳೆಗಾರರಾದ ಹೆಚ್.ಎಸ್.ಧರ್ಮರಾಜ್, ಮುರುಳೀಧರ್ ಬ್ಯಾರವಳ್ಳಿ, 7 ಬೀನ್ ತಂಡದ ಸದಸ್ಯರು ಭಾಗವಹಿಸಿದ್ದರು.ತರಬೇತಿ ವಿಭಾಗದ ಡಾ. ಸಂತೋಷ್ ರೆಡ್ಡಿ, ಡಾ.ರಂಜಿನಿ ಭಾಗವಹಿಸಿದ್ದರು.
