ಕಳಸ:ಇಲ್ಲಿನ ಜೆಇಎಂ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ವಿದುಷಾ ರಾಜ್ಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದ್ದಾಳೆ.
ಕೋಲಾರದಲ್ಲಿ ನಡೆದ ಕ್ರೀಡಾಕೂಟದ 3 ಕಿ.ಮೀ ವೇಗದ ನಡಿಗೆಯಲ್ಲಿ ವಿದುಷಾ ಮೂರನೇ ಸ್ಥಾನ ಪಡೆದಿದ್ದಾಳೆ.ವಿದುಷಾ ಕಳಸ ಜೈನ ಬಸದಿಯ ಬಳಿಯ ನಿವಾಸಿ ವೀಣಾ ಮತ್ತು ಸತ್ಯೇಂದ್ರ ಅವರ ಪುತ್ರಿ.

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ವಿದುಷಾ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಳು.ರಾಜ್ಯ ಮಟ್ಟದ ನಡಿಗೆ ಸ್ಪರ್ಧೆಯ ಕೊನೆ ಸುತ್ತಿನವರೆಗೂ ಅಗ್ರಸ್ಥಾನದಲ್ಲಿದ್ದ ವಿದುಷಾ ಕೊನೆಯ ಹಂತದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು ಎಂದು ತರಬೇತುದಾರ ಪ್ರಶಾಂತ್ ತಿಳಿಸಿದ್ದಾರೆ.
