ಕಳಸ:ಇಲ್ಲಿನ ರೋಟರಿ ಕ್ಲಬ್ ಹಾಗೂ ಬೆಂಗಳೂರಿನ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಇದೇ 10ರಿಂದ ಪಟ್ಟಣದಲ್ಲಿ 10 ದಿನಗಳ ಯೋಗ ಶಿಬಿರ ಆಯೋಜಿಸಲಾಗಿದೆ.
ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕøತರಾದ ಯೋಗ ಪಟು ಡಿ.ನಾಗರಾಜ್ ಮತ್ತು ಚಂದ್ರಕಲಾ 10 ದಿನಗಳ ಕಾಲ ಯೋಗ, ಧ್ಯಾನ, ಪ್ರಾಣಾಯಾಮದ ತರಬೇತಿ ನೀಡಲಿದ್ದಾರೆ.ಈ ಶಿಬಿರದಲ್ಲಿ ಔಷಧಿ ಇಲ್ಲದೆ ಹಲವಾರು ರೋಗಗಳನ್ನು ಗುಣಪಡಿಸುವ ಮತ್ತು ಬೊಜ್ಜು ಕರಗಿಸುವ ಆಸನಗಳನ್ನು ಹೇಳಿಕೊಡಲಾಗುತ್ತದೆ ಎಂದು ರೋಟರಿ ಅಧ್ಯಕ್ಷೆ ಸಾವತ್ರಿ ಜೋಷಿ ತಿಳಿಸಿದ್ದಾರೆ.
ಬೆಳಿಗ್ಗೆ 6.15ರಿಂದ 7.30ರವರೆಗೆ ಅಥವಾ ಸಂಜೆ 5.15ರಿಂದ 6.30ರವರೆಗಿನ ಎರಡು ಅವಧಿಗಳಲ್ಲಿ ತರಬೇತಿ ನಡೆಯಲಿದ್ದು 8ರಿಂದ 80 ವರ್ಷ ವಯಸ್ಸಿನವರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಹೆಚ್ಚಿನ ವಿವರಗಳಿಗೆ 9448590193 ಅಥವಾ 9449986209 ಸಂಪರ್ಕಿಸಬಹುದಾಗಿದೆ.
