ಕಳಸ:ಇಲ್ಲಿನ ಚಂದ್ರನಾಥ ಬಸದಿ ಅರ್ಚಕರಾದ ಅಜಿತ್ ಪ್ರಸಾದ್ ಮತ್ತು ಕಲ್ಪನಾ ದಂಪತಿ ಪುತ್ರಿ ಅನನ್ಯಾ ಜೈನ್ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 9ನೇ ಸ್ಥಾನ ಗಳಿಸಿದ ಸಾಧನೆ ಮಾಡಿದ್ದಾರೆ.
ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಅವರು ವಾಣಿಜ್ಯ ವಿಭಾಗದಲ್ಲಿ 589 ಅಂಕ ಗಳಿಸಿದ್ದಾರೆ.ಎಕೋನಾಮಿಕ್ಸ್ ಮತ್ತು ಅಕೌಂಟೆನ್ಸಿಯಲ್ಲಿ ಪೂರ್ಣ 100 ಅಂಕ ಗಳಿಸಿದ ಅವರು ಕಾಮರ್ಸ್ ಮತ್ತು ಬಿಸಿನೆಸ್ ಸ್ಟಡೀಸ್ ವಿಷಯದಲ್ಲಿ ತಲಾ 98 ಅಂಕ ಗಳಿಸಿದ್ದಾರೆ.

ಜೆಇಎಂ ಶಾಲೆಯ ಹಳೆ ವಿದ್ಯಾರ್ಥಿನಿ ಆಗಿದ್ದ ಅನನ್ಯಾ ಸಾಧನೆಗೆ ಕಳಸದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
