ಕಳಸ:ಬಲಿಗೆ ಗ್ರಾಮದ ಕ್ಯಾತನಮಕ್ಕಿ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯಲು ಇಲಾಖೆಯಲ್ಲಿ ನೊಂದಾಯಿಸಿದ ವಾಹನಗಳಿಗೆ ಮಾತ್ರ ಅವಕಾಶ ಎಂದು ಕಳಸ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಗೌಡ ತಿಳಿಸಿದ್ದಾರೆ.
ದುರ್ಗಮವಾದ ಈ ಪ್ರದೇಶಕ್ಕೆ ಬೈಕ್ ಮತ್ತಿತರ ಖಾಸಗಿ ವಾಹನಗಳ ಸಂಚಾರದಿಂದ ಬಹಳಷ್ಟು ತೊಂದರೆ ಆಗುತ್ತಿದೆ.ರಕ್ಷಿತ ಅರಣ್ಯಕ್ಕೆ ಒಳಪಡುವ ಈ ಪ್ರದೇಶಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪ್ ಮಾಲೀಕರು ಕಡ್ಡಾಯವಾಗಿ ಅರಣ್ಯ ಇಲಾಖೆಯ ಬಳಿ ನೊಂದಣಿ ಮಾಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಅರಣ್ಯ ಇಲಾಖೆಯ ನೀತಿ ನಿಯಮಾವಳಿಗಳಿಗೆ ಒಳಪಟ್ಟು ಜೀಪ್ಗಳು ಸಂಚರಿಸಬೇಕು. ಜುಲೈ 10ರ ಒಳಗೆ ವಾರ್ಷಿಕ ಅಥವಾ ಅರ್ಧವಾರ್ಷಿಕ ಶುಲ್ಕ ಪಾವತಿಸಿ ಅಧಿಕೃತ ಬ್ಯಾಡ್ಜ್ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಬಗ್ಗೆ 2021ರಲ್ಲೇ ನಿರ್ಣಯ ಆಗಿದ್ದು ನೊಂದಣಿ ಮಾಡಿಕೊಳ್ಳದ ವಾಹನಗಳು ಮತ್ತಿತರ ಖಾಸಗಿ ವಾಹನಗಳಿಗೆ ಗಿರಿಶ್ರೇಣಿಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
