ಸಮೀಪದ ಎಡದಾಳು ಬೋವಿಪಾಲ್ ಪ್ರದೇಶದಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪದ ಮೇಲೆ ಮೂವರನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.
ಎಡದಾಳು ಪ್ರದೇಶದ ಬೋವಿಪಾಲ್ ಸಾಬಿತ್ ಅವರ ಮನೆಯಲ್ಲಿ 2 ದಿನದ ಹಿಂದೆ ಯಾರ ಇಲ್ಲದ ವೇಳೆ ಕಳ್ಳರು ನುಗ್ಗಿ ಒಂದು ಜೊತೆ ಚಿನ್ನದ ಜುಮಕಿ, ಬೆಳ್ಳಿ ಕಾಲು ಗೆಜ್ಜೆ ಮತ್ತು 9 ಮೂಟೆ ಗೋಟು ಅಡಿಕೆ ಕಳ್ಳತನ ಮಾಡಿದ್ದರು. ಈ ಪ್ರಕರಣ ದಾಖಲಿಸಿಕೊಡ ಕಳಸ ಪೊಲೀಸರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಆದರ್ಶ ಕುಮಾರ್, ಸಬ್ ಇನ್ಸ್ಪೆಕ್ಟರ್ ಬಾಬು ಅಗೇರ, ಸಿಬ್ಬಂದಿಗಳಾದ ಪ್ರಮೋದ್, ಗಿರೀಶ್, ವಿಶ್ವನಾಥ್, ಸಿದ್ದಪ್ಪ, ಶಿವಕುಮಾರ್, ಸುನಿಲ್, ಚಾಲಕ ಕಾಶಿನಾಥ್ ಅವರ ತಂಡ ತನಿಖೆ ನಡೆಸಿತ್ತು.
ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ನಯಾಜ್ ಅಂಜುಮ್, ರಬ್ಬಾನಿ ಅವರ ತಾಂತ್ರಿಕ ಸಹಕಾರದೊಂದಿಗೆ ಮಾಹಿತಿ ಸಂಗ್ರಹಿಸಿ ಮೂವರನ್ನು ಕಳಸ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೋಟೆಹೊಳೆ ನಿವಾಸಿ ಕಿರಣ್(27), ಗಣಪತಿಕಟ್ಟೆ ನಿವಾಸಿ
ರವಿ (50) ಮತ್ತು ಮೇಲಂಗಡಿ ನಿವಾಸಿ ನಿತೇಶ್(33) ಅವರನ್ನು ಬಂಧಿಸಿದ್ದಾರೆ. ಬಂಧಿüತರಿಂದ 62 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಜುಮುಕಿ, ಬೆಳ್ಳಿ ಕಾಲುಗೆಜ್ಜೆ ಮತ್ತು 9 ಮೂಟೆ ಗೋಟು ಅಡಿಕೆಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.
