ಕಳಸ:ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆ ಬಳಿ ನಿರ್ಮಾಣ ಆಗುತ್ತಿರುವ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಆ ರಸ್ತೆ ಸಂಪರ್ಕವನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು ಸೇತುವೆಗೆ ಸಂಬಂಧಪಟ್ಟ ತಡೆಗೋಡೆ ಮತ್ತಿತರ ರಸ್ತೆ ಕಾಮಗಾರಿ ಕೈಗೊಳ್ಳಲು ಏಪ್ರಿಲ್ 25ರವರೆಗೆ ಈ ರಸ್ತೆ ಸಂಚಾರ ನಿಷೇಧಿಸಲಾಗಿದೆ. ಬದಲಿಯಾಗಿ ಕಳಸ-ಹಳುವಳ್ಳಿ-ದಾರಿಮನೆ ಮೂಲಕ ಹೊರನಾಡು ಸಂಪರ್ಕ ರಸ್ತೆ ಬಳಸಬಹುದಾಗಿದೆ ಎಂದೂ ತಿಳಿಸಲಾಗಿದೆ.
ಶೃಂಗೇರಿಯಿಂದ ಹೊರನಾಡು ಬರುವ ವಾಹನಗಳು ಕೂಳೂರು- ಕೊಗ್ರೆ-ಶಾಂತಿಗ್ರಾಮ_ಬೈಲುಮನೆ-ಮೆಣಸಿನಹಾಡ್ಯ-ಬಲಿಗೆ ಮೂಲಕ ಹೊರನಾಡು ತಲುಪಬಹುದಾಗಿದೆ ಎಂದೂ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
