ಕಳಸ:ಇಲ್ಲಿನ ಕೆಪಿಎಸ್ ಶಾಲೆಯ ವಿದ್ಯಾರ್ಥಿ ಶಿವಾನಂದ್ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿ ದಕ್ಷಿಣ ಭಾರತಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ಧಾರವಾಡದಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಶಿವಾನಂದ್ ಕಾಳುಮೆಣಸಿನ ಫಸಲು ಕೊಯ್ಯುವ ಯಂತ್ರದ ಪ್ರಾತ್ಯಕ್ಷಿಕೆ ನಡೆಸಿದ್ದರು. ಈ ಯಂತ್ರದ ಮಾದರಿ ಅವರನ್ನು ದಕ್ಷಿಣ ಭಾರತ ವಲಯ ಮಟ್ಟದ ಸ್ಪರ್ಧೆಗೆ ಪ್ರವೇಶ ಕೊಡಿಸಿದೆ.

ಹೈದರಾಬಾದಿನಲ್ಲಿ ಇದೇ ತಿಂಗಳ 19ರಿಂದ 23ರವರೆಗೆ ನಡೆಯುವ ವಿಜ್ಞಾನ ಮೇಳದಲ್ಲಿ ಶಿವಾನಂದ್ ಭಾಗವಹಿಸಲಿದ್ದಾರೆ. ಕಳಸ ಕೆಪಿಎಸ್ ಶಾಲೆಯ ಅಟಲ್ಜೀ ಟಿಂಕರಿಂಗ್ ಲ್ಯಾಬ್ ಮಾರ್ಗದರ್ಶಕ ಸಂದೇಶ್ ಮಾರ್ಗದರ್ಶನದಲ್ಲಿ ಶಿವಾನಂದ್ ಈ ಯಂತ್ರದ ಪ್ರಾತ್ಯಕ್ಷಿಕೆ ನೀಡಿದ್ದರು. ಶಿವಾನಂದ್ ಕಳಸ ಕೆಪಿಎಸ್ ಶಾಲೆಯ ಶಿಕ್ಷಕಿ ಯಶೋದಮ್ಮ ಮತ್ತು ರೇವಣಸಿದ್ದಪ್ಪನವರ ಪುತ್ರ.
