ಕಳಸ:ಇಲ್ಲಿನ ಮಹಾವೀರ ರಸ್ತೆಯ ನಿವಾಸಿಯಾಗಿದ್ದ ನಿವೃತ್ತ ಯೋಧ ಜಾನ್ ಫರ್ನಾಂಡಿಸ್(90) ಭಾನುವಾರ ನಿಧನರಾಗಿದ್ದಾರೆ.
ಶನಿವಾರ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಜಾನ್ ಫರ್ನಾಂಡಿಸ್ ಸಂಸೆ ಐಟಿಐ ಉಪನ್ಯಾಸಕ ಅಶೋಕ್ ಫರ್ನಾಂಡಿಸ್ ಎಂಬ ಪುತ್ರ, ಶಿಕ್ಷಕಿ ರೇಖಾ ಎಂಬ ಪುತ್ರಿ ಮತ್ತು ಬಂಧುವರ್ಗವನ್ನು ಅಗಲಿದ್ದಾರೆ.
ಅವರ ಅಂತಿಮ ದರ್ಶನಕ್ಕೆ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಳಸದ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.ಮಧ್ಯಾಹ್ನ 3 ಗಂಟೆಗೆ ಜಗದೀಶ್ವರ ಚರ್ಚಿನಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದೆ.
