ಕಳಸ:ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಶುಕ್ರವಾರ ಮುಕ್ತಾಯವಾದ ಅಂತರರಾಷ್ಟ್ರೀಯ ಪವನ ಶಕ್ತಿ ಸಮ್ಮೇಳನದಲ್ಲಿ ಕಳಸದ ದೀಶಿತ್ ಜೈನ್ ಭಾಗವಹಿಸಿದರು.
ಭಾರತದ ಅರಬ್ಬಿ ಸಮುದ್ರದ ಪಶ್ಚಿಮ ಕರಾವಳಿಯಲ್ಲಿ ಕಡಲಾಚೆಯ ಗಾಳಿಯ ವೇಗದ ಅಧ್ಯಯನದ ಬಗ್ಗೆ ಸಮ್ಮೇಳನದಲ್ಲಿ ಅವರು ವಿಚಾರ ಮಂಡನೆ ಮಾಡಿದರು.ಈ ಪ್ರದೇಶದಲ್ಲಿ ಪವನ ಶಕ್ತಿ ಆಧಾರದಲ್ಲಿ ವಿದ್ಯುತ್ ಉತ್ಪಾದಿಸುವ ಸಾಧ್ಯತೆಗಳ ಬಗ್ಗೆ ಅವರು ಮಾಹಿತಿ ಹಂಚಿಕೊಂಡರು. ದೀಶಿತ್ ಜೈನ್ ಕಳಸದ ಕವಿ ಪ್ರೇಮ್ ಕುಮಾರ್ ಮತ್ತು ಸೌಭಾಗ್ಯ ದಂಪತಿಯ ಪುತ್ರ.

ದೀಶಿತ್ ಜೈನ್ ಕಳೆದ 15 ವರ್ಷಗಳಿಂದ ಪವನ ವಿದ್ಯುತ್ ಸಂಸ್ಥೆಗಳಲ್ಲಿ ಭಾರತ ಮತ್ತು ಡೆನ್ಮಾರ್ಕ್ ದೇಶದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದದ್ದಾರೆ. ಮೂರು ದಿನದ ಸಮ್ಮೇಳನದಲ್ಲಿ ಭಾಗವಹಿಸಿದ ಅವರು ಸದ್ಯಕ್ಕೆ ವಿಂಡ್ಸಿಮ್ ಸಂಸ್ಥೆಯಲ್ಲಿ ಪವನ ಶಕ್ತಿ ಎಂಜಿನಿಯರಿಂಗ್ ವಿಭಾಗದ ಸಂಶೋಧನೆ ಮತ್ತು ಅಧ್ಯಯನ ವಿಭಾಗದಲ್ಲಿ ಕೆಲಸ ಮಾಡುತಿದ್ದಾರೆ.
