ಕಳಸ:ಇಲ್ಲಿನ ರೋಟರಿ ಸಂಸ್ಥೆಯು ಪಟ್ಟಣದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆಗಾಗಿ ಮೂರು ಸಂಗ್ರಹಣಾ ಕೇಂದ್ರಗಳನ್ನು ಸ್ಥಾಪಿಸಿದೆ.
ಪಟ್ಟಣದ ಹೊರನಡು ರಸ್ತೆಯ ಅನ್ನಪೂರ್ಣೇಶ್ವರಿ ಮೋಟಾರ್ಸ್ ಕಚೇರಿ, ಕೆ.ಎಂ.ರಸ್ತೆಯ ಅನ್ನಪೂರ್ಣೇಶ್ವರಿ ಪೆಟ್ರೋಲ್ ಬಂಕ್ ಹಾಗೂ ಮಹಾವೀರ ರಸ್ತೆಯ ಶ್ರೀನಿವಾಸ ಎಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಿಸಲಾಗುತ್ತದೆ.
ಕಳಸ ತಾಲ್ಲೂಕಿನ ನಿವಾಸಿಗಳು ತಮ್ಮ ಹಾಳಾದ ಕೀಬೋರ್ಡ್, ಮೌಸ್, ಚಾರ್ಜರ್, ಚಾರ್ಜಿಂಗ್ ಕೇಬಲ್, ರೂಟರ್, ಟಿವಿ, ಫೋನ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಮೇಲೆ ತಿಳಿಸಿದ ಮೂರು ಕೇಂದ್ರಗಳಿಗೆ ತಲುಪಿಸಬೇಕು.ಆನಂತರ ಅವುಗಳನ್ನು ರೋಟರಿ ಸಂಸ್ಥೆ ಸೂಕ್ತವಾಗಿ ವಿಲೇವಾರಿ ಮಾಡುತ್ತದೆ ಎಂದು ರೋಟರಿ ಅಧ್ಯಕ್ಷೆ ಸಾವಿತ್ರಿ ಜೋಷಿ ತಿಳಿಸಿದ್ದಾರೆ.
