ಕಳಸ:ಹಿರೇಬೈಲಿನಲ್ಲಿ ಕೇಂದ್ರ ಕಚೇರಿ ಇರುವ ಇಡಕಿಣಿ ಕೃಷಿ ಮತ್ತು ಪತ್ತಿನ ಸಹಕಾರ ಸಂಘವು ಕಳೆದ ಸಾಲಿನಲ್ಲಿ 107 ಕೋಟಿ ವ್ಯವಹಾರ ನಡೆಸಿ 15.07 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಹೆಮ್ಮಕ್ಕಿ ಗಿರೀಶ್ ತಿಳಿಸಿದರು.
ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತಾಡಿದ ಅವರು, ಸಂಘದಲ್ಲಿ 2377 ಸದಸ್ಯರು ಇದ್ದು 98 ಲಕ್ಷ ಷೇರು ಬಂಡವಾಳ ಇದೆ. ಸಂಘದಲ್ಲಿ 13.46 ಕೋಟಿ ರೂಪಾಯಿ ಠೇವಣಿ ಇದ್ದು ಸ್ವಂತ ಬಂಡವಾಳದಲ್ಲಿ 18.88 ಕೋಟಿ ಸಾಲ ನೀಡಲಾಗಿದೆ ಎಂದರು.
ಸದಸ್ಯರು ತಮ್ಮ ಲಾಭಾಂಶವನ್ನು ಕಟ್ಟಡದ ನಿಧಿಗೆ ವರ್ಗಾಯಿಸಲು ಸಭೆಯಲ್ಲಿ ಒಪ್ಪಿಗೆ ನೀಡಿದರು. ಉಪಾಧ್ಯಕ್ಷ ಸಂತೋಷ್, ನಿರ್ದೇಶಕ ಭೋಜರಾಜ್ ಮಾತನಾಡಿದರು. ನಿರ್ದೇಶಕರಾದ ಗೋವರ್ಧನ್, ವೃಂದಾವತಿ, ನಾಗೇಶ್, ಹರೀಶ್, ವಿದ್ಯಾಸಾಗರ್, ಸಂಗೀತ, ವೆರೋನಿಕಾ ಕ್ರಾಸ್ತಾ, ವೈಶಾಲಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಯಾಗ್, ಸಂಘದ ಸಿಇಓ ಸತೀಶ್ ಭಾಗವಹಿಸಿದ್ದರು.
ಸಂಘದ ಸದಸ್ಯರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
