ಕಳಸ:ಇಲ್ಲಿನ ಕಳಸೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶನಿವಾರ ಸಕಾಲಿಕ ಮಳೆಗಾಗಿ ಪ್ರಾರ್ಥನೆ ನೆರವೇರಿಸಲಾಯಿತು.
ಕಳಸೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಶತವಾರ ರುದ್ರಾಭಿಷೇಕ, ಏಕಾದಶ ರುದ್ರಹೋಮ, ಪರ್ಜನ್ಯ ಜಪ ಮತ್ತು ಪರ್ಜನ್ಯ ಹೋಮ ನೆರವೇರಿಸಲಾಯಿತು.
ಸರ್ವಾಂಗಸುಂದರಿ ಸನ್ನಿಧಿಯಲ್ಲಿ ಸಹಸ್ರನಾಮ, ಕುಂಕುಮಾರ್ಚನೆ, ಆನೆವಿಘ್ನೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅಷ್ಟೋತ್ತರ, ಪಂಚಕಜ್ಜಾಯ ನಿವೇದನೆ ಮಾಡಲಾಯಿತು. ಕ್ಷೇತ್ರಪಾಲ ಸನ್ನಿಧಿಯಲ್ಲಿ ಚರುಬಲಿ ಸಮರ್ಪಣೆಯ ನಂತರ ಕಳಸೇಶ್ವರನಲ್ಲಿ ಸಕಾಲಿಕ ಮಳೆಗಾಗಿ ಪ್ರಾರ್ಥನೆ ನೆರವೇರಿಸಲಾಯಿತು.
ನೂರಾರು ಭಕ್ತರು, ಕಳಸೇಶ್ವರ ಸ್ವಾಮಿ ಧಾರ್ಮಿಕ ಸೇವಾ ಪ್ರತಿಷ್ಟಾನದ ಪದಾಧಿಕಾರಿಗಳು ಭಾಗವಹಿಸಿದ್ದರು.
