ಕಳಸ:ಕುದುರೆಮುಖ-ಎಸ್.ಕೆ.ಬಾರ್ಡರ್ ರಸ್ತೆ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ಇದೇ 9ರಂದು ವಾಣಿಜ್ಯ ವಾಹನಗಳ ಮಾಲೀಕರ ಸಂಘ ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಲಿದ್ದಾರೆ.
ಈ ಪ್ರಮುಖ ಹೆದ್ದಾರಿಯ ನಿರ್ವಹಣೆ ಕೆಲಸವನ್ನು ಜೆಸಿಬಿ ಮೂಲಕ ಆರಂಭಿಸಲಾಗಿದೆ.ಆದರೆ ಈ ಕೆಲಸಕ್ಕೆ ಅರಣ್ಯ ಇಲಾಖೆ ಅಡಿಪಡಿಸುತ್ತಿದೆ. ಇದನ್ನು ಖಂಡಿಸಿ ಕುದುರೆಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ರಸ್ತೆ ಬದಿಯಲ್ಲಿ ಚರಂಡಿ ತೆರೆದು ರಸ್ತೆ ಬದಿ ಬೆಳೆದಿದ್ದ ಗಿಡಗಂಟಿಗಳನ್ನು ತೆಗೆಯುವ ಕೆಲಸವನ್ನು ಗುತ್ತಿಗೆದಾರರು ಜೆಸಿಬಿ ಬಳಸಿ ಮಾಡುತ್ತಿದ್ದರು.ಇದನ್ನು ಅರಣ್ಯ ಇಲಾಖೆ ಸಿಬ್ಬಂದಿ ವಿರೋಧಿಸಿದ್ದಾರೆ.ಇದರಿಂದ ಗುತ್ತಿಗೆದಾರ ರಸ್ತೆಯ ಈ ಭಾಗ ಬಿಟ್ಟು ಉಳಿದೆಡೆ ಮಾತ್ರ ನಿರ್ವಹಣೆ ಮಾಡುತ್ತಿದ್ದಾರೆ. ಹೆದ್ದಾರಿ ನಿರ್ವಹಣೆ ಕೆಲಸ ಅರೆಬರೆ ಆಗುತ್ತಿದೆ ಎಂದೂ ವಾಣಿಜ್ಯ ವಾಹನಗಳ ಸಂಘ ದೂರಿದೆ.
ಈ ಹೆದ್ದಾರಿಯ ಎಲ್ಲ ಬಳಕೆದಾರರು ಕೂಡ 9ರಂದು ನಡೆಯುವ ಪ್ರತಿಭಟನೆ ಮತ್ತು ರಸ್ತೆತಡೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
